ಕಾಂಕ್ರಿಟ್ ರಸ್ತೆಗೆ ಹಾಕಿದ ಅಡಿಕೆ ಸಿಪ್ಪೆ ಹಾಗೂ ರಸ್ತೆ ಬದಿಯಲ್ಲಿ ಬೆಳೆದ ಪೊದೆಗಳ ತೆರವು:ಗ್ರಾಮ ಪಂಚಾಯಿತಿ ಸದಸ್ಯ ಸಿರಾಜ್ ರವರ ಸ್ಪಂದನೆಗೆ ಮೆಚ್ಚುಗೆ

ಬಣಕಲ್ :ಬಣಕಲ್ ನಾಡ ನಾಡ ಕಚೇರಿ ಹೋಗುವ ಕಾಂಕ್ರಿಟ್ ರಸ್ತೆಯ ಕ್ಯೂರಿಂಗ್‌ಗೆ ಹಾಕಿದ ಅಡಿಕೆ ಸಿಪ್ಪೆಯನ್ನು ತೆರವುಗೊಳಿಸದೇ ಬಿಡಲಾಗಿತ್ತು. ಮಳೆಯಿಂದಾಗಿ ಪಾದಚಾರಿಗಳಿಗೆ ಹಾಗೂ ವಾಹನ ಸವಾರರಿಗೆ ಜಾರಿ ಬೀಳುವ ಅಪಾಯವನ್ನು ತಂದೊಡ್ಡುತಿತ್ತು ಎಂದು ಗ್ರಾಮಸ್ಥರು ಗ್ರಾಮ ಪಂಚಾಯಿತಿ ಸದಸ್ಯರಾದ ಸಿರಾಜ್ ರವರ ಗಮನಕ್ಕೆ ಸಮಸ್ಯೆ ತಂದಿದ್ದಾರೆ.

ಬುಧವಾರದಂದು ಸಿರಾಜ್ ರವರು ಸ್ಥಳಕ್ಕೆ ಭೇಟಿ ನೀಡಿ ಹಲವು ದಿನಗಳಿಂದ ರಸ್ತೆಯಲ್ಲೇ ಚೆಲ್ಲಾಫಿಲ್ಲಿಯಾಗಿ ಬಿದ್ದಿದ್ದ ಸಿಪ್ಪೆಗಳನ್ನು ಕಾರ್ಮಿಕರನ್ನು ಬಿಟ್ಟು ತೆರವುಗೊಳಿಸಿಕೊಟ್ಟಿದ್ದಾರೆ. ಹಾಗೆಯೇ ಉರ್ದು ಶಾಲಾ ಪಕ್ಕದ ಕಂಪೌಂಡ್ ಬಳಿ ಬೆಳೆದಿದ್ದ ಪೊದೆಗಳಿಂದ ಶಾಲಾ ಮಕ್ಕಳು ಹಾಗೂ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದರು ರಸ್ತೆಗೆ ಹರಡಿಕೊಂಡಿದ್ದ ಗಿಡಗಳನ್ನು ಕೂಡ ತೆರವುಗೊಳಿಸಿಕೊಟ್ಟಿದ್ದಾರೆ.


ಕೂಡಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯರಾದ ಸಿರಾಜ್ ರವರ ಗಮನಕ್ಕೆಸಮಸ್ಯೆ ತಂದ ಎರಡೇ ದಿನಕ್ಕೆ ಪರಿಹರಿಸಿಕೊಟ್ಟಿದ್ದಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.