ಬಣಕಲ್ ನಲ್ಲಿ ಮುಸ್ಲಿಂ ಬಾಂಧವರಿಂದ ಸಂಭ್ರಮದ ಈದ್ ಮಿಲಾದ್ ಮೆರವಣಿಗೆ

ಬಣಕಲ್ :ಪ್ರವಾದಿ ಮಹಮ್ಮದ ಪೈಗಂಬರ ಅವರ ಜನ್ಮದಿನದ ಅಂಗವಾಗಿ ಈದ್ ಮಿಲಾದ್ ಅನ್ನು ಬಣಕಲ್ ನಲ್ಲಿ ಇಂದು ಮಂಗಳವಾರ ಸಂಭ್ರಮದಿಂದ ಆಚರಿಸಲಾಯಿತು.

ಪಟ್ಟಣದ ಮೋಹಿದ್ದಿನ್ ಜುಮ್ಮಾ ಮಸೀದಿ ಹಾಗೂ ಬಣಕಲ್ ಜಾಮಿಯಾ ಮಸೀದಿ ಇವರ ಆಶ್ರಯದಲ್ಲಿ ಮಸೀದಿಯ ಮುಖಂಡರು ಹಾಗೂ ಮುಸ್ಲಿಂ ಬಂದುಗಳು ಈದ್‌ ಮಿಲಾದ್ ಮೆರವಣಿಗೆಯಲ್ಲಿ ಪಾಲ್ಗೊಂಡರು.

ಸಾಂಪ್ರದಾಯಿಕ ವೇಷಭೂಷಣದೊಂದಿಗೆ ಅಲ್ಹಾನ ನಾಮಸ್ಮರಣೆ ಮಾಡುತ್ತ ಮೆರವಣಿಗೆಯಲ್ಲಿ ಸಾಗಿದರು. ಮುಹಮ್ಮದ್ ಪೈಗಂಬರ ಅವರು ನಡೆದು ಬಂದ ದಾರಿ ಹಾಗೂ ಜನರಿಗೆ ನೀಡಿರುವ ಸಂದೇಶಗಳನ್ನು ಸಾರುತ್ತಾ ಪ್ರಮುಖ ಬೀದಿಗಳಲ್ಲಿ ಸಾಗಿದರು. ಮೂರು ತಾಸಿಗೂ ಅಧಿಕ ಕಾಲ ಮೆರವಣಿಗೆ ನಡೆಯಿತು. ಈದ್‌ ಮಿಲಾದ್ ಅಂಗವಾಗಿ ಮಸೀದಿಗಳಲ್ಲಿ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಪ್ರಮುಖ ಬೀದಿಯಲ್ಲಿ ಮಕ್ಕಳು ಹಿರಿಯರು ಹಸಿರು ಝೆಂಡಾಗಳ ಮೂಲಕ ಮೆರವಣಿಗೆಯಲ್ಲಿ ಪಾಲ್ಗೊಂಡರು.

ವರದಿ: ✍️ಸೂರಿ ಬಣಕಲ್