ಬಣಕಲ್ .ಕಪುಚಿನ್ ಸೇವಾ ಕೇಂದ್ರ (ರಿ )ವಿಮುಕ್ತಿ ವತಿಯಿಂದ ಇಂದು ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಬಣಕಲ್ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಸಂಘದ ಮಹಿಳೆಯರು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಕಪುಚಿನ್ ಸೇವಾ ಕೇಂದ್ರದ ನಿರ್ದೇಶಕರಾದ ಎಡ್ವಿನ್ ಡಿಸೋಜ ಮಾತನಾಡಿ ಮಕ್ಕಳಲ್ಲಿ ಪರಿಸರ ರಕ್ಷಣೆ, ಪ್ರಾಣಿ ಪಕ್ಷಿಗಳ ರಕ್ಷಣೆ ಬಗ್ಗೆ ಮಾಹಿತಿ ನೀಡಲಾಯಿತು.ಹಾಗೆ ಮಕ್ಕಳಿಗೆ ಪರಿಸರ ಸ್ವಚ್ಛತೆ ಬಗ್ಗೆ ಪ್ಲಾಸ್ಟಿಕ್ ಬಳಕೆ ಮಾಡದಂತೆ ಅರಿವು ಮೂಡಿಸಲಾಯಿತು. ಪರಿಸರ ಸಂರಕ್ಷಣೆ ಕೇವಲ ಒಂದು ದಿನದ ಕೆಲಸವಲ್ಲ ಪ್ರತಿನಿತ್ಯ ಮಾಡುವ ಕೆಲಸ ಇದು ಪ್ರತಿಯೊಬ್ಬರ ಜವಾಬ್ದಾರಿ ಕೂಡ ಇಂತಹ ಕಾರ್ಯವನ್ನು ಪ್ರತಿನಿತ್ಯ ಪಾಲಿಸಿದಲ್ಲಿ ಮಾತ್ರ ಪರಿಸರ ಸಂರಕ್ಷಣೆಯಾಗುತ್ತದೆ ಎಂದರು. ಮಕ್ಕಳು ತಮ್ಮ ಮನೆಯ ಸುತ್ತ ಮುತ್ತ ಸ್ವಚ್ಚ ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ 180ಮಕ್ಕಳು, ಅತಿಥಿಗಳಾಗಿ ಡೆಪ್ಯೂಟಿ ರೆಂಜರ್ ಬಸವರಾಜ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಆತಿಕ ಬಾನು, ಕಪ್ಪು ಚಿನ್ ಸೇವಾ ಕೇಂದ್ರದ ನಿರ್ದೇಶಕರು ಎಫ್.ಆರ್. ಎಡ್ವಿನ್ ಡಿಸೋಜ, ಉರ್ದು ಶಾಲಾ ಶಿಕ್ಷಕಿ ರೇಷ್ಮ, ಸಂಪನ್ಮೂಲ ವ್ಯಕ್ತಿ ಚರಣ್ ಕುಮಾರ್ ವಲಯ ಅರಣ್ಯಧಿಕಾರಿ ಮೂಡಿಗೆರೆ ವಲಯ ಇದ್ದರು.