2012 ರಲ್ಲಿ ಅತ್ಯಾಚಾರಕ್ಕೊಳಗಾಗಿ ಕೊಲೆಯಾದ 17 ವರ್ಷದ ಸೌಜನ್ಯ ಪರ ನ್ಯಾಯಕ್ಕೆ ಆಗ್ರಹಿಸಿ ಬೆಂಗಳೂರಿನ ಯುವ ಉತ್ಸಾಹಿ ಯುವಕರ ತಂಡ ಬೆಂಗಳೂರಿನಿಂದ ಧರ್ಮಸ್ಥಳ ಕ್ಕೆ ಪಾದಯಾತ್ರೆ ಹೊರಟಿದ್ದಾರೆ.
ಇಂದು ಬಣಕಲ್ ಮಾರ್ಗದ ಮೂಲಕ ಧರ್ಮಸ್ಥಳಕ್ಕೆ ಸಾಗಿದರು. ಈ ಸಂದರ್ಭದಲ್ಲಿ ಮಾತನಾಡಿದ ಹೋರಾಟಗಾರರು ನಮ್ಮ ಬೆಂಬಲಕ್ಕೆ ನಿಮ್ಮಲ್ಲೇರ ಸಹಕಾರ ಬೇಕು ಹಲವು ಅಡೆ ತಡೆಗಳನ್ನು ದಾಟಿ ಇಲ್ಲಿವರೆಗೆ ಬಂದಿದ್ದೇವೆ ಮುಂದಿನ ಪಯಣ ಇನ್ನೂ ದುರ್ಗಮ,ಹಲವು ಬೆದರಿಕೆ ಕರೆಗಳು ಬಂದಿವೆ ಪಾದಯಾತ್ರೆ ಮೋಟಕು ಗೊಳಿಸುವಂತೆ ಆದರೆ ಯಾವುದೇ ಕಾರಣಕ್ಕೂ ಪಾದಯಾತ್ರೆ ನಿಲ್ಲುವುದಿಲ್ಲ ಗುರಿ ಮುಟ್ಟೋವರೆಗೂ ಪಾದಯಾತ್ರೆ ಸಾಗುತ್ತದೆ ಸೌಜನ್ಯ ಪರ ಹೋರಾಟ ನಿರಂತರ ಸೌಜನ್ಯಳಿಗೆ ನ್ಯಾಯ ಸಿಗೋವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಹೋರಾಟಗಾರ ಶರಣ ಬಸಪ್ಪ ಬಣಕಲ್ ನ್ಯೂಸ್ ಗೆ ತಿಳಿಸಿದ್ದಾರೆ.
ವರದಿ ✍️ಸೂರಿ ಬಣಕಲ್