ಚಿಕ್ಕಮಗಳೂರು :ಕೋವಿಡ್ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಚಿಕ್ಕಮಗಳೂರು – ಶಿವಮೊಗ್ಗ ಹಾಗೂ ಚಿಕ್ಕಮಗಳೂರು -ಯಶವಂತಪುರ ರೈಲು ಸಂಚಾರ ಮತ್ತೆ ಆರಂಭಗೊಳ್ಳಲಿದೆ .
ಆ 9 ರಿಂದ ಚಿಕ್ಕಮಗಳೂರು ಶಿವಮೊಗ್ಗ , 10 ರಿಂದ ಚಿಕ್ಕಮಗಳೂರು ಯಶವಂತಪುರ ರೈಲು ಓಡಾಡಲಿವೆ .
ಶಿವಮೊಗ್ಗಕ್ಕೆ ಹೊರಡುವ ರೈಲು ಪ್ರತಿದಿನ ಬೆಳಿಗ್ಗೆ 6.55 ಕ್ಕೆ ಇಲ್ಲಿಂದ ಹೊರಟು 9.45 ಕ್ಕೆ ಶಿವಮೊಗ್ಗ ತಲುಪಲಿದೆ .
ಶಿವಮೊಗ್ಗದಿಂದ ಸಂಜೆ 6.35 ಕ್ಕೆ ಹೊರಟು ಚಿಕ್ಕಮಗಳೂರನ್ನು ರಾತ್ರಿ 9.40 ಕ್ಕೆ ತಲುಪಲಿದೆ .
ಚಿಕ್ಕಮಗಳೂರು – ಯಶವಂತಪುರ ರೈಲು ಇದೇ ತಿಂಗಳ 10 ರಿಂದ ಸಂಚಾರ ಪುನರಾರಂಭ ಮಾಡಲಿದ್ದು, ಚಿಕ್ಕಮಗಳೂರಿನಿಂದ ಬೆಳಿಗ್ಗೆ 7.50 ಕ್ಕೆ ಹೊರಟು ಮಧ್ಯಾಹ್ನ 2.15 ಕ್ಕೆ ಯಶವಂತಪುರ ಮುಟ್ಟುತ್ತದೆ .
ಯಶವಂತಪುರದಿಂದ ಮಧ್ಯಾಹ್ನ 3.30 ಕ್ಕೆ ಹೊರಟು ರಾತ್ರಿ 8.55 ಕ್ಕೆ ಚಿಕ್ಕಮಗಳೂರು ತಲುಪುತ್ತದೆ ಎಂದು ರೈಲ್ವೆ ಇಲಾಖೆ ಹೇಳಿದೆ .
ಬುಕ್ಕಿಂಗ್ ಎಲ್ಲಿ ? :ಈ ಹಿಂದೆ ಜಿಲ್ಲಾ ಆಟದ ಮೈದಾನದಲ್ಲಿರುವ ಸ್ಕೌಟ್ ಭವನದ ಕಟ್ಟಡದಲ್ಲಿ ರೈಲ್ವೆ ಟಿಕೆಟ್ ಬುಕಿಂಗ್ ವ್ಯವಸ್ಥೆ ಇತ್ತು .
ರೈಲು ಸಂಚಾರ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಅದು ಕೂಡ ಬಾಗಿಲು ಹಾಕಿದೆ .
ಮುಂದೆ ಇಲ್ಲಿ ಎನ್ನುವ ಬಗ್ಗೆ ಇನ್ನೂ ಕೂಡ ರೈಲ್ವೆ ಇಲಾಖೆ ಸುಳಿವು ನೀಡಿಲ್ಲ .
1ಮೂಲದ ಪ್ರಕಾರ ಚಿಕ್ಕಮಗಳೂರು ರೈಲ್ವೆ ನಿಲ್ದಾಣದಲ್ಲಿ ಈ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದು ಹೇಳಲಾಗುತ್ತಿದೆ ,
ಆದರೆ ಇದು ದುಬಾರಿ ಆಗಲಿದ್ದು ಪ್ರಯಾಣಿಕರಿಗೆ ಹೊರೆಯಾಗುತ್ತದೆ, ಎನ್ನುವ ಮಾತುಗಳು ಕೇಳಿಬರುತ್ತಿವೆ