ಪೊಲೀಸ್ ಇಲಾಖೆ ವತಿಯಿಂದ “ತೆರೆದ ಮನೆ ” ಎಂಬ ಕಾರ್ಯಕ್ರಮ ಬಣಕಲ್ ಠಾಣೆಯಲ್ಲಿ ನಡೆಯಿತು.
ಬಣಕಲ್ ರಿವರ್ ವ್ಯೂ ಶಾಲಾ ಮಕ್ಕಳು ತೆರೆದ ಮನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾನೂನಿನ ಬಗ್ಗೆ ಹಲವು ಮಾಹಿತಿಗಳನ್ನು ಪಡೆದುಕೊಂಡರು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಪೊಲೀಸ್ ಇನ್ಸ್ಪೆಕ್ಟರ್ ರನ್ನಗೌಡ ಪಾಟೀಲ್ ಮಾತನಾಡಿ ವಿದ್ಯಾರ್ಥಿಗಳಿಗೆ ಶಾಲಾ ಹಂತದಲ್ಲಿ ದೇಶಭಕ್ತಿ ಮೂಡಿಸುವ ಸಲುವಾಗಿ ಈ ಕಾರ್ಯಕ್ರಮ ವನ್ನು ನಮ್ಮ ಪೊಲೀಸ್ ಠಾಣೆ ಯಲ್ಲಿ ಮಾಡ ಲಾಗುತ್ತದೆ ಶಾಲಾ ಮಕ್ಕಳಲ್ಲಿರುವ ಆತಂಕವನ್ನು ದೂರ ಮಾಡುವ ಉದ್ದೇಶ ಇಟ್ಟುಕೊಂಡು ಸಿನಿಮಾ ಮತ್ತು ಟಿವಿಗಳಲ್ಲಿ ತೋರಿಸುವ ಪೊಲೀಸರಿಗೆ ಮತ್ತು ಹೊರ ಗಡೆ ನೆಡೆಯುವ ಬಗ್ಗೆ ಬಹಳ ವ್ಯತ್ಯಾಸವಿದೆ ಈ ಕಾರ್ಯಕ್ರಮ ದಿಂದ ವಿದ್ಯಾರ್ಥಿ ಮತ್ತು ಜನರಲ್ಲಿ ದೇಶಭಕ್ತಿ ಮೂಡಿಸಲಾಗುತ್ತಿದೆ ನಮ್ಮ ದೇಶದ ಯೋಧರು ಮತ್ತು ಸೇನೆಗಳು ನಮ್ಮ ಸಾರ್ವಜನಿಕರಿಗೆ ಎಷ್ಟು ಸೇವೆ ಮಾಡುತ್ತಿದೆ ಎಂದು ಮಕ್ಕಳಲ್ಲಿ ಅರಿವು ಮೂಡಿಸಲಾಗುತ್ತದೆ. ಶಾಲಾ ಮಕ್ಕಳಲ್ಲಿ ಪೊಲೀಸ್ ಎಂದರೆ ಒಂದು ಭಯವಿರು ತ್ತದೆ ಅದನ್ನು ದೂರ ಮಾಡಿ ನಮ್ಮ ಪೊಲೀಸ್ ಠಾಣೆ ಯಲ್ಲಿ ಎಲ್ಲಾ ಕಚೇರಿಗಳಲ್ಲಿ ಹೇಗೆ ದಿನನಿತ್ಯ ಕೆಲಸ ನಡೆಯುತ್ತದೆ ಅದೇ ರೀತಿ ನಮ್ಮ ಠಾಣೆಯಲ್ಲಿ ಕೆಲಸ ನಿರ್ವಹಿಸಲಾಗುತ್ತಿದೆ ಎಂದು ಮಕ್ಕಳಿಗೆ ತೋರಿಸುವ ಸಲುವಾಗಿ ಪೊಲೀಸ್ ಠಾಣೆಯು ಕೂಡ ಒಂದು ಸರ್ಕಾರಿ ಕಚೇರಿ ಎಂದು ತೋರಿಸುವ ಸಲುವಾಗಿ ಈ ಕಾರ್ಯ ಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಈ ಸಂದರ್ಭದಲ್ಲಿ ಠಾಣೆಯ ಸಿಬ್ಬಂದಿ ವರ್ಗ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಹಾಜರಿದ್ದರು
ವರದಿ :ಸೂರಿ ಬಣಕಲ್
Banakal News ನಮ್ಮ ನಡೆ ರೋಚಕ ಸುದ್ದಿಯ ಕಡೆ