ಬಣಕಲ್ :ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಬಣಕಲ್ ನ್ಯೂಸ್ ವತಿಯಿಂದ ಮುದ್ದು ಶ್ರೀ ಕೃಷ್ಣ ವೇಷ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಸ್ಪರ್ಧೆ ಆರಂಭಕ್ಕೂ ಮೊದಲು MBBSವಿದ್ಯಾರ್ಥಿ ಬಿನ್ನಡಿಯಾ ಯುಗಾಂಧರ್ ಅವರನ್ನು ಸನ್ಮಾನಿಸಲಾಯಿತು.
ಕೃಷ್ಣನ ವೇಷದಲ್ಲಿಮಕ್ಕಳನ್ನು ನೋಡುವುದೇ ಆಹ್ಲಾದಕರ. ಅದರ ನಡುವೆ ಮತ್ತಷ್ಟು ತುಂಟ ಕೃಷ್ಣನ ಚೇಷ್ಟೆಗಳು ಮೈದಾನದಲ್ಲಿ ಮೇಳೈಸಿದ್ದು ಸಾರ್ವಜನಿಕರಿಗೆ ಮತ್ತಷ್ಟು ಮುದ ನೀಡಿದವು. ಕ್ಯಾಮೆರಾ ಕಣ್ಣಿಗೆ ಪೋಸ್ ನೀಡುತ್ತಿದ್ದ ಮುದ್ದು ಕೃಷ್ಣಂದಿರು ನೆರೆದ ಜನರ ಮುಖದ ಮೇಲೆ ಮಂದಹಾಸ ಬೀರುವಂತೆ ಪ್ರೇರೇಪಿಸುತ್ತಿದ್ದ ದೃಶ್ಯ ಅಪ್ಯಾಯಮಾನವಾಗಿತ್ತು. ಪೂರ್ತಿ ಮಗ್ನವಾಗಿ ಮಕ್ಕಳ ಮುಖದ ಮೇಳೆ ಕೃಷ್ಣನನ್ನು ಮೂಡಿಸುತ್ತಾ ಮೈಮರೆತ ಹೆತ್ತವರು, ವೇದಿಕೆ ಮೇಲೆ ನಲಿಯುವ ಮಕ್ಕಳಿಗೆ ಹುರಿದುಂಬಿಸುತ್ತಾ ನಲಿಯುವ ಹೆತ್ತವರು, ವೇದಿಕೆ ಮೇಲೆ ಹತ್ತಲು ಹೆದರಿ ಅಳುವ ಕಂದಮ್ಮನನ್ನು ಮುದ್ದು ಮಾಡುತ್ತಿದ್ದ ಹೆತ್ತವರು ಯಶೋಧ ನಂದನನ ಹಳೆಯ ಲೀಲೆಗಳನ್ನು ಮತ್ತೆ ನೆನಪಿಸುವಂತೆ ಭಾಸವಾಗುತ್ತಿತ್ತು ಸ್ಪರ್ಧೆಯಲ್ಲಿ 0ದಿಂದ 2.5ವರ್ಷದೊಳಗಿನ ವಿಭಾಗದಲ್ಲಿ ವೇನಿಷಾ ಪ್ರಥಮ ಬಹುಮಾನ, ನೋಶಿಕ ದ್ವಿತೀಯ ಬಹುಮಾನ, ಯಶ್ವಿನ್ ತೃತೀಯ ಬಹುಮಾನ, ಲಿರಿಶ್ ನಾಲ್ಕನೇ ಸ್ಥಾನ ಪಡೆದರು.
2.5ವರ್ಷದಿಂದ 5ವರ್ಷದ ಒಳಗಿನ ಮಕ್ಕಳಲ್ಲಿ ಪೂರ್ವಿ ಪ್ರಥಮ ಸ್ಥಾನ,ವಿಯೆನ್ನ ದ್ವಿತೀಯ ಸ್ಥಾನ,ಅಥರ್ವ M. ಗೌಡ ತೃತೀಯ ಸ್ಥಾನ,ಮೇಘ ನಾಲ್ಕನೇ ಸ್ಥಾನ ಪಡೆದುಕೊಂಡರು.ಶ್ರೀ ಕೃಷ್ಣ ವೇಷ ಸ್ಪರ್ಧೆಗೆ ತೀರ್ಪುಗಾರರಾಗಿ ತ್ರಿದಾತ್ರಿ ಕಿಡ್ಸ್ ನಾ ಪ್ರಾಂಶುಪಾಲರಾದ ವನಿತಾ ಲಕ್ಷ್ಮಣ್ ಹಾಗೂ ಉಪನ್ಯಾಸಕರಾದ ದೀಪ್ತಿ ಕುಮಾರ್ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು
Banakal News ನಮ್ಮ ನಡೆ ರೋಚಕ ಸುದ್ದಿಯ ಕಡೆ