ಪೊಲೀಸ್ ಇಲಾಖೆ ಮತ್ತು ಜನರ ನಡುವೆ ಭಯದ ಬದಲು ಸ್ನೇಹತ್ವ ಬೆಳೆಸಿಕೊಳ್ಳಬೇಕು ಎಂದು ಬಣಕಲ್ ಠಾಣಾ ಪಿ.ಎಸ್.ಐ ಜಂಬೂ ರಾಜ್ ಮಹಾಜನ್ ತಿಳಿಸಿದರು.
ನಗರದ ಬಣಕಲ್ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಅವರು ಜನ ಸಂಪರ್ಕ ಸಭೆ ನಡೆಸಿ ಪೊಲೀಸ್ ಇಲಾಖೆಗೆ ಸಂಬಂದಿಸಿದ ಕುಂದು ಕೊರತೆಗಳನ್ನು ಆಲಿಸಿದರು.ಕಾನೂನು ಸೇವೆಗೆ ಸಂಬಂಧಿಸಿದಂತೆ ಸಾರ್ವಜನಿಕ ಸಮಸ್ಯೆಗಳನ್ನು ಬಗೆಹರಿಸಲು ಪೊಲೀಸ್ ಇಲಾಖೆ ಸದಾ ಸಿದ್ದವಿದ್ದು, ಜನ ಸಾಮಾನ್ಯರು ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ತಿಳಿಸಿದರು. ಜನರು ಸಂಚಾರ ನಿಯಮಗಳನ್ನು ಪಾಲಿಸುವುದರ ಜೊತೆಗೆ ಹೆಲ್ಮೆಟ್ ಗಳನ್ನು ಕಡ್ಡಾಯವಾಗಿ ದರಿಸಬೇಕು ಎಂದರು, ಗ್ರಾಮದಲ್ಲಿ ಆಪರಾಧಿಗಳ ನಿಯಂತ್ರಣಕ್ಕೆ ಪೊಲೀಸ್ ಇಲಾಖೆ ಶ್ರಮಿಸುತ್ತಿದೆ. ಸಾರ್ವಜನಿಕರು ತಮ್ಮಲ್ಲಿರುವ ಮಾಹಿತಿ ಹಂಚಿಕೊಂಡು ಅಪರಾಧಿಗಳ ಪತ್ತೆಗೆ ಸಹಕರಿಸಬೇಕು ಎಂದು ತಿಳಿಸಿದರು. ಸಭೆಯಲ್ಲಿ ಸಾರ್ವಜನಿಕರು ತಮ್ಮ ಅಹವಾಲು ಸಲ್ಲಿಸಿದರುವರದಿ
:ಸೂರಿ ಬಣಕಲ್