ಬಣಕಲ್ ನಲ್ಲಿ ನಡೆದ ಬಿ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಬಣಕಲ್ ಪ್ರೌಢ ಶಾಲೆಯ ವಿದ್ಯಾರ್ಥಿನಿ ದೀಪ್ತಿ ಮೂರು ವಿಭಾಗಗಳಲ್ಲಿ ಪ್ರಥಮ ಸ್ಥಾನ ಪಡೆದು ವೈಯುಕ್ತಿಕ ಚಾಂಪಿಯನ್ ಆಗಿ ಹೊರಹೋಮ್ಮಿದ್ದಾಳೆ. ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ದೀಪ್ತಿಬಣಕಲ್ ಚೆಕ್ಕೋಡು ನಿವಾಸಿಯಾಗಿದ್ದಾರೆ.ಕಲ್ಲೇಶ್, ಯಶೋದಾ,ದಂಪತಿಯರ ಮಗಳಾದ ದೀಪ್ತಿ ಉತ್ತಮ ಕ್ರೀಡಾಪಟುವಾಗಿ ಬೆಳೆಯುತ್ತಿದ್ದಾರೆ. ಬಡತನ ಮೆಟ್ಟಿನಿಂತು ಓಟದ ಸ್ಪರ್ಧೆಯ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ದೀಪ್ತಿಯ ಸಾಧನೆ ಇತರರಿಗೆ ಸ್ಫೂರ್ತಿಯಾಗಿದೆ.ಬಣಕಲ್ ಪ್ರೌಢ ಶಾಲೆಯಲ್ಲಿ 10 ನೇ ತರಗತಿಯಲ್ಲಿ ಅಧ್ಯಯನ ಮಾಡುತ್ತಿರುವ ಈ ವಿದ್ಯಾರ್ಥಿನಿ, ಪಾಠದೊಟ್ಟಿಗೆ ಆಟಕ್ಕೂ ಆದ್ಯತೆ ನೀಡುತ್ತಿದ್ದಾರೆ. ಗ್ರಾಮೀಣ ಬಾಲಕಿಗೆ ತನ್ನ ಪ್ರತಿಭೆ ಅನಾವರಣಗೊಳಿಸಲು ಕ್ರೀಡಾ ಉತ್ಸಾಹವೇ ಪೂರಕವಾಗಿದೆ. ತಾಲೂಕಿನ ಬಣಕಲ್ ನ ಚೆಕ್ಕೊಡು ನಲ್ಲಿ ವಾಸವಾಗಿರುವ ದೀಪ್ತಿಯ ಸಾಧನೆ ಶಾಲೆಗೆ ಹಾಗೂ ಪೋಷಕರಿಗೆ ಸಂತಸ ತರಿಸಿದೆ.. ಬಾಲ್ಯದಿಂದಲೇ ಕ್ರೀಡೆಯನ್ನು ಆಯ್ಕೆ ಮಾಡಿಕೊಂಡ ದೀಪ್ತಿ ಹಲವಾರು ಪ್ರಶಸ್ತಿ ಗಳನ್ನು ತನ್ನ ಮುಡಿಗೆರಿಸಿಕೊಂಡಿದ್ದಾಳೆ. ರಾಜ್ಯ ಮಟ್ಟದಲ್ಲೂ ಅಡಿದ್ದಾಳೆ. ಕಡುಬಡತನವಿದ್ದರೂ ಮನೆಯಲ್ಲಿ ಕುಟುಂಬದ ಸದಸ್ಯರು ಆಕೆಯ ಕ್ರೀಡಾ ಪ್ರತಿಭೆಗೆ ಅಡ್ಡಿಪಡಿಸಿಲ್ಲ. ಪ್ರೋತ್ಸಾಹ ನೀಡುತ್ತ ಬಂದಿರುವುದರಿಂದಲೇ ಈವರೆಗೆ ಸತತವಾಗಿ ಕ್ರೀಡಾಕೂಟಗಳಲ್ಲಿ ಮೊದಲ ಹಾಗೂ ಎರಡನೇ ಸ್ಥಾನ ಸತತವಾಗಿ ಪಡೆದಿದ್ದು, ವಿದ್ಯಾರ್ಥಿನಿಯ ಹೆಗ್ಗಳಿಕೆ’ನನಗೆ ಚಿಕ್ಕ ವಯಸ್ಸಿನಿಂದಲೂ ಆಟದ ಬಗ್ಗೆ ಆಸಕ್ತಿ. ಅದರಲ್ಲಿ ಸಾಧನೆ ಮಾಡಿ. ಹೆಸರು ಮಾಡಬೇಕೆಂಬ ಅಸೆ. ಮನೆ ಹಾಗೂ ಶಾಲೆಯಲ್ಲಿ ಉತ್ತಮ ಸಹಕಾರ ಸಿಗುತ್ತಿದೆ’ ಎಂದು ದೀಪ್ತಿ ಹೇಳಿದರು.ದೀಪ್ತಿಯ ಸಾಧನೆ ಹೀಗೆ ಮುಂದುವರಿದು ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಪ್ರಜ್ವಲಿಸುವಂತಾಗಲಿ ಎಂದು ಬಣಕಲ್ ನ್ಯೂಸ್ ವತಿಯಿಂದ ಹಾರೈಸುತ್ತೇವೆ.
✍️ವರದಿ:ಸೂರಿ ಬಣಕಲ್