ಬಣಕಲ್: ಪಿಲಿಪಿನ್ಸ್ ನಲ್ಲಿ ಎಂಬಿಬಿಎಸ್ ಪರೀಕ್ಷೆಯಲ್ಲಿ ಬಿನ್ನಡಿ ಗ್ರಾಮದ ಯುಗಾಂದರ್ ಪದವಿ ಪಡೆದು ಮಲೆನಾಡಿಗೆ ಕೀರ್ತಿ ತಂದಿದ್ದಾರೆ.
ಯುಗಂದರ್ ಪಿಲಿಪೆನ್ಸ್ ನಲ್ಲಿ ಎಂಬಿಬಿಎಸ್ ಪದವಿ ಪಡೆದು ಭಾರತದಲ್ಲಿ ಎಫ್ಎಂಜಿಇ (ವಿದೇಶಿ ವೈದ್ಯಕೀಯ ಪದವಿ ಪರೀಕ್ಷೆ) ಪ್ರವೇಶ ಪರೀಕ್ಷೆಯಲ್ಲಿ ತನ್ನ ಪ್ರಥಮ ಪ್ರಯತ್ನದಲ್ಲೆ ತೇರ್ಗಡೆ ಹೊಂದಿದ್ದಾರೆ.ಮುಂದೆ ಎಂಡಿ ವ್ಯಾಸಂಗ ಮಾಡುವ ಆಸಕ್ತಿ ಹೊಂದಿದ್ದಾರೆ.ಇವರು ಬಿನ್ನಡಿ ಗ್ರಾಮದ ಸತೀಶ್ ಹಾಗೂ ಸವಿತ ದಂಪತಿಗಳ ಪುತ್ರರಾಗಿದ್ದಾರೆ.ತನ್ನ ಪ್ರಾಥಮಿಕ ಶಿಕ್ಷಣವನ್ನು ಬಣಕಲ್ ನಜರತ್ ಶಾಲೆಯಲ್ಲಿ ಮುಗಿಸಿ ಪಿಯುಸಿಯನ್ನು ಉಜಿರೆಯ ಎಸ್ ಡಿ ಎಂ ಕಾಲೇಜಿನಲ್ಲೇ ಮುಗಿಸಿದ್ದಾರೆ.ಇವರ ಸಾಧನೆಗೆ ಪೋಷಕರು ಮತ್ತು ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.