ಬಿ ವಲಯ ಮಟ್ಟದ ಪ್ರೌಢ ಶಾಲಾ ಕ್ರೀಡಾಕೂಟ: ಬಣಕಲ್ ಪ್ರೌಢ ಶಾಲೆಗೆ ಸಮಗ್ರ ಪ್ರಶಸ್ತಿ

ಬಣಕಲ್ :ಮೂಡಿಗೆರೆ ಬಿ ವಲಯ ಮಟ್ಟದ ಪ್ರೌಢಶಾಲಾ ಕ್ರೀಡಾಕೂಟದಲ್ಲಿ ಬಣಕಲ್ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಸಮಗ್ರ ಪ್ರಶಸ್ತಿ ಪಡೆಯುವುದರ ಮೂಲಕ ಕ್ರೀಡಾಕೂಟದಲ್ಲಿ ಉತ್ತಮ ಸಾಧನೆ ಮಾಡಿ ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಬಾಲಕರ ಗುಂಪು ವಿಭಾಗದಲ್ಲಿ ಖೋಖೋ ಪ್ರಥಮ ಸ್ಥಾನ.ವಾಲಿಬಾಲ್ ಪ್ರಥಮ ಸ್ಥಾನ.400ಮೀಟರ್ ಪ್ರಥಮ ಸ್ಥಾನ.ಹ್ಯಾಮರ್ ಎಸೆತ ಪ್ರಥಮ ಸ್ಥಾನ.ಶಾಟ್ ಪುಟ್ ದ್ವಿತೀಯ ಸ್ಥಾನ.ಡಿಸ್ಕಸ್ ದ್ವಿತೀಯ ಸ್ಥಾನ.200ಮೀಟರ್ ಪ್ರಥಮ ಸ್ಥಾನ.400ದ್ವಿತೀಯ ಸ್ಥಾನ.400ತೃತೀಯ ಸ್ಥಾನ 800ತೃತೀಯ ಸ್ಥಾನ ಪಡೆದಿರುತ್ತಾರೆ.

ಬಾಲಕಿಯರ ಗುಂಪು ವಿಭಾಗದಲ್ಲಿ ಖೋಖೋ ಪ್ರಥಮ ಸ್ಥಾನ, ವಾಲಿಬಾಲ್‌ ಪ್ರಥಮ ಸ್ಥಾನ, 100ಮೀಟರ್ ಪ್ರಥಮ ಸ್ಥಾನ, 200ಮೀಟರ್ ಪ್ರಥಮ ಸ್ಥಾನ, ಲಾಂಗ್ ಜಂಪ್ ಪ್ರಥಮ ಸ್ಥಾನ, 800ಮೀಟರ್ ದ್ವಿತೀಯ ಸ್ಥಾನ, 1500ಪ್ರಥಮ ಸ್ಥಾನ ಡಿಸ್ಕಸ್ ತ್ರೋ ದ್ವಿತೀಯ ಸ್ಥಾನ, ಹ್ಯಾಮರ್ ತ್ರೋ ದ್ವಿತೀಯ ಸ್ಥಾನ, ತ್ರಿವಿದ ಜಿಗಿತ ದ್ವಿತೀಯ ಸ್ಥಾನ ಪಡೆದಿರುತ್ತಾರೆ.

ವೈಯಕ್ತಿಕ ವಿಭಾಗದಲ್ಲಿ 10ನೇ ತರಗತಿಯ ದೀಪ್ತಿ 100ಮೀಟರ್, 200ಮೀಟರ್, ಲಾಂಗ್ ಜಂಪ್ ಮೂರು ವಿಭಾಗಗಳಲ್ಲಿ ಪ್ರಥಮ ಸ್ಥಾನ ಪಡೆದು ವೈಯಕ್ತಿಕ ಚಾಂಪಿಯನ್ ಆಗಿರುತ್ತಾಳೆ.

ಕ್ರೀಡಾಕೂಟದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷರು. ಮುಖ್ಯಾಪಾಧ್ಯಯರು ಹಾಗೂ ಎಲ್ಲಾ ಶಿಕ್ಷ ಕ ಶಿಕ್ಷ ಕಿಯರು ಅಭಿನಂದನೆ ತಿಳಿಸಿದ್ದಾರೆ.

✍️ವರದಿ :ಸೂರಿ ಬಣಕಲ್