ಬಣಕಲ್:ಮೋಡ ಮುಸುಕಿದ ವಾತಾವರಣ, ಭತ್ತದ ನಾಟಿಗೆ ಸಿದ್ಧಗೊಂಡಿದ್ದ ಕೆಸರು ಗದ್ದೆ, ಓಟ, ಹಗ್ಗ ಜಗ್ಗಾಟ, ಕೆಸರಿನಲ್ಲಿ ಮಿಂದಾಟ.. ಇದು ಪಟ್ಟಣದ ಬಣಕಲ್ ವಿಲೇಜ್ ಮಾರ್ಗದ ಗುರುರಾಜ್ ಅವರ ಜಮೀನಿನಲ್ಲಿ ಭಾನುವಾರ ಕಪುಚಿನ್ ಕೃಷಿಕ ಸೇವಾ ಕೇಂದ್ರ (ರೀ), ವಿಮುಕ್ತಿ ಬಣಕಲ್ ಇವರ ವತಿಯಿಂದ ನಡೆದ ಕೆಸರಡ್ ಒಂಜಿ ದಿನ (ಕೇಸರಲ್ಲಿ ಒಂದು ದಿನ) ಎಂಬ ನಾಮಂಕಿತದಲ್ಲಿ ಕೆಸರು ಗದ್ದೆ ಕ್ರೀಡಾಕೂಟ ನಡೆಯಿತು.
ಗ್ರಾಮದ ವಿವಿಧೆಡೆಗಳಿಂದ ಆಗಮಿಸಿದ್ದ ಸಂಘದ ಮಹಿಳೆಯರು ಹಾಗೂ ಮಕ್ಕಳು ಹದಗೊಳಿಸಿದ್ದ ಕೆಸರು ಗದ್ದೆಗೆ ಇಳಿದು ನಾನಾ ಸ್ಪರ್ಧೆಗಳಲ್ಲಿ ಪಾಲ್ಗೊಂಡರು. 16 ವರ್ಷದೊಳಗಿನ ಹಾಗೂ 16 ವರ್ಷ ಮೇಲ್ಪಟ್ಟವರಿಗೆ ಪ್ರತ್ಯೇಕವಾಗಿ ಹಗ್ಗ ಜಗ್ಗಾಟ, ಕೆಸರು ಗದ್ದೆ ಓಟ, ಹೀಗೆ ನಾನಾ ರೀತಿಯ ಆಟಗಳಲ್ಲಿ ಪಾಲ್ಗೊಂಡರು. ಗದ್ದೆ ತುಂಬಾ ಕೆಸರು ಕೆಸರಿನ ನಡುವೆ ವಿವಿಧ ಸ್ಪರ್ದಾಳುಗಳು ಕೆಸರಲ್ಲಿ ಎದ್ದು ಬಿದ್ದು ಹೋರಳಾಡಿದ ದೃಶ್ಯ ನೋಡುಗರಿಗೆ ಮುದನೀಡಿತು. ಸ್ಪರ್ಧೆಗಳಲ್ಲಿ ಪಾಲ್ಗೊಂಡ ಮಕ್ಕಳು, ಮಹಿಳೆಯರು ಕೆಸರು ಗದ್ದೆಯಲ್ಲಿ ಎದ್ದು ಬಿದ್ದು ಖುಷಿಪಟ್ಟರು. ನೂರಾರು ಮಂದಿ ಪ್ರೇಕ್ಷಕರು ಪ್ರೋತ್ಸಾಹ ನೀಡಿದರು.
ಚಾಲನೆ: ಕ್ರೀಡಾಕೂಟಕ್ಕೆ ಶ್ರೀಯುತ ಜಂಬೂರಾಜ್ ಮಹಾಜನ್ (ಎಸ್.ಐ) ಉದ್ಘಾಟಿಸಿ ಮಾತನಾಡಿ, ಮಾನಸಿಕ, ದೈಹಿಕ ಕಸರತ್ತಿನ ಜತೆಗೆ ಮನರಂಜನೆಗೆ ಗ್ರಾಮೀಣ ಕ್ರೀಡೆಗಳು ಸಹಕಾರಿಯಾಗಿವೆ ವಿದ್ಯಾರ್ಥಿಗಳು ಕಂಪ್ಯೂಟರ್, ಮೊಬೈಲ್‌ಗಳಿಂದ ದೂರು ಉಳಿದು ಗ್ರಾಮೀಣ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ವ.ಫಾ. ಎಡ್ವಿನ್ ಡಿಸೋಜ ನಿರ್ದೇಶಕರು ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ವ.ಫಾ. ಲ್ಯಾನ್ಸಿ ಲೋಬೊ, ಶ್ರೀಮತಿ ಆತಿಕಾ ಬಾನು ಅಧ್ಯಕ್ಷರು ಗ್ರಾಮ ಪಂಚಾಯಿತಿ,ಶ್ರೀಯುತ ಇರ್ಫಾನ್ ಉಪಾಧ್ಯಕ್ಷರು ಗ್ರಾಮ ಪಂಚಾಯಿತಿ, ಶ್ರೀಮತಿ ಲೀಲಾವತಿ ಮಾಜಿ ಅಧ್ಯಕ್ಷರು ಗ್ರಾಮಪಂಚಾಯಿತಿ, ಶ್ರೀಮತಿ ಯಶೋದ ಅಧ್ಯಕ್ಷರು ವಿಮುಕ್ತಿ ಸ್ವಸಹಾಯ ಸಂಘಗಳ ಒಕ್ಕೂಟ, ಕಾರ್ಯಕರ್ತೆ ವಿಂದ್ಯ ಯೋಗೇಶ್ ಹಾಗೂ ಎಲ್ಲಾ ಘಟಕದ ಕಾರ್ಯಕರ್ತೆಯರು ಈ ಸಂದರ್ಭದಲ್ಲಿ ಹಾಜರಿದ್ದರು.
*ವರದಿ :ಸೂರಿ ಬಣಕಲ್*
Banakal News ನಮ್ಮ ನಡೆ ರೋಚಕ ಸುದ್ದಿಯ ಕಡೆ