ಬಣಕಲ್ : ಬೆಳಗಿನ ಜಾವಾ 8:30ರ ಸಮಯದಲ್ಲಿ ಮತ್ತಿಕಟ್ಟೆ ಯಿಂದ ದಾಸರಹಳ್ಳಿ ಮಾರ್ಗವಾಗಿ ತೆರಳುತ್ತಿದ್ದ ಶರತ್ ಎಂಬುವರ ಆಟೋದ ಮೇಲೆ ಭಾರಿ ಗಾತ್ರದ ಕಾಡುಹಂದಿಯೊಂದು ರಸ್ತೆಗೆ ಅಡ್ಡಲಾಗಿ ಬಂದು ಗುದ್ದಿದ ಪರಿಣಾಮ ಆಟೋ ಮುಗುಚಿ ಬಿದ್ದ ಘಟನೆ ಬಣಕಲ್ ಸಮೀಪದ ದಾಸರಹಳ್ಳಿ ಫಾರೆಸ್ಟ್ ಬಳಿ ಸಂಭವಿಸಿದೆ .ಮಲೆನಾಡಿನಲ್ಲಿ ಕಾಡುಪ್ರಾಣಿಗಳ ಹಾವಳಿ ಇತ್ತೀಚಿಗೆ ಮಿತಿ ಮೀರಿದೆ ಒಂದು ತಿಂಗಳಿಂದ ಆನೆ ಹುಲಿ ಹೀಗೆ ನಾನಾರೀತಿಯಲ್ಲಿ ಜನರ ಮೇಲೆ ದಾಳಿ ನಡೆದಿರುವುದು ಕಂಡು ಬಂದಿದೆ ಈಗ ಈ ಘಟನೆ ಕೂಡ ಜನರಿಗೆ ಗಾಬರಿ ತರಿಸಿದೆ.ಆಟೋಗೆ ಗುದ್ದಿದ ಪರಿಣಾಮ ಮುಗುಚಿ ಬಿದ್ದು ಸಂಪೂರ್ಣ ಜಕಂ ಗೊಂಡಿದೆ. ಗಾಡಿಗೆ ಸಿಲುಕಿದ ಹಂದಿ ಗಾಬರಿಗೊಂಡು ಆಟೋದಲ್ಲಿ ಕುಳಿತಿದ್ದ ಪ್ರೇಮ ಎಂಬುವವರಿಗೆ ಹಿಂದಿನಿಂದ ದಾಳಿ ನಡೆಸಿ ಪರಾರಿಯಾಗಿದೆ ಎಂದು ತಿಳಿದು ಬಂದಿದೆ. ಆಟೋಗೆ ಗುದ್ದಿದ ರಭಸಕ್ಕೆ ಆಟೋ ಸಂಪೂರ್ಣ ನುಜ್ಜು ಗುಜ್ಜಾಗಿದೆ
ಆಟೋದಲ್ಲಿದ್ದ ಅಪ್ಪಿ. ಶಾರದಾ ಎಂಬುವವರಿಗೆ ಸಣ್ಣ ಪುಟ್ಟ ಗಾಯವಾಗಿದೆ.ಸ್ವಲ್ಪ ಹೆಚ್ಚು ಗಾಯಗೊಂಡ ಪ್ರೇಮರವರಿಗೆ ಮೂಡಿಗೆರೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಚಿಕ್ಕಮಗಳೂರಿಗೆ ಕರೆದೋಯ್ಯಲಾಗಿದೆ. ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಬಣಕಲ್ ಪೊಲೀಸರು ಹಾಗೂ ಅರಣ್ಯಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಈ ಸಂಬಂಧ
ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
Banakal News ನಮ್ಮ ನಡೆ ರೋಚಕ ಸುದ್ದಿಯ ಕಡೆ