ಬಣಕಲ್ :ಒಂದು ತಿಂಗಳ ಹಿಂದೆ ನಿರ್ಮಾಣವಾಗಿದ್ದ ರಸ್ತೆಯ ಕಾಂಕ್ರಿಟ್ ಕಿತ್ಕೊಂಡು ಬರ್ತಿದೆ. ಮೂಡಿಗೆರೆ ತಾಲೂಕಿನ ಬಣಕಲ್ ಗ್ರಾಮದ ಹೊರಟ್ಟಿ ಕುವೆಂಪುನಗರ ದಿಂದ ಗುಡ್ಡೆಟ್ಟಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆ ಹಲವು ವರ್ಷಗಳಿಂದ ಹದಗೆಟ್ಟಿತ್ತು.
ಗ್ರಾಮದ ಆ ರಸ್ತೆ ನಾಲ್ಕೈದು ಊರಿಗೆ ಸಂಪರ್ಕ ಕಲ್ಪಿಸುವ ರಸ್ತೆ. ಹದಗೆಟ್ಟು ಬಹಳ ವರ್ಷಗಳೇ ಕಳೆದಿತ್ತು. ಗ್ರಾಮಸ್ಥರ ಹಲವು ವರ್ಷದ ಬೇಡಿಕೆಯಿಂದ ಕೊನೆಗೂ ರಸ್ತೆ ಅಭಿವೃದ್ಧಿಗೆ ಒಂದು ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಿತ್ತು.. ಅದರಂತೆ ರಸ್ತೆ ಕೂಡ ನಿರ್ಮಾಣವಾಗಿದೆ. ಆದರಿಗ ಆ ರಸ್ತೆ ಕಾಮಗಾರಿ ವಿಚಾರವಾಗಿ ಗ್ರಾಮಸ್ಥರು ರೊಚ್ಚಿಗೆದ್ದಿದ್ದಾರೆ. ಹೊಸದಾಗಿ ನಿರ್ಮಾಣ ಆಗಿರೋ ರಸ್ತೆಯ ಕಳಪೆ ಕಾಮಗಾರಿ ನೋಡಿ ಶಾಕ್ ಆಗಿದ್ದಾರೆ. ಹೊಸ ರಸ್ತೆ ಸಿದ್ಧ ಆಯ್ತು ಇನ್ಮೆಲೆ ನೆಮ್ಮದಿಯಾಗಿ ಓಡಾಡ್ಬಹುದು ಅಂತ ನಿಟ್ಟುಸಿರು ಬಿಟ್ಟಿದ್ರು ಜನ. ಆದ್ರೆ ರಸ್ತೆ ಕಾಮಗಾರಿ ಮುಗಿದು ಒಂದು ತಿಂಗಳು ಕಳೆದಿಲ್ಲ . ಈಗ ಊರಿನ ಜನರೆ ಶಾಕ್ ಆಗಿದ್ದಾರೆ. ಯಾಕಂದ್ರೆ ಹೊಳೆಯುತ್ತಿದ್ದ ರಸ್ತೆಯ ಬಣ್ಣ ಬಯಲಾಗಿದೆ. ಒಂದು ತಿಂಗಳ ಹಿಂದೆ ನಿರ್ಮಾಣವಾಗಿದ್ದ ರಸ್ತೆಯ ಕಾಂಕ್ರಿಟ್ ಕಿತ್ಕೊಂಡು ಬರ್ತಿದೆ.ಬಣಕಲ್ ನಿಂದ ಗುಡ್ಡೆಟ್ಟಿ ಸಂಪರ್ಕ ಕಲ್ಪಿಸುವ ಈ ರಸ್ತೆ ಹಲವು ವರ್ಷಗಳಿಂದ ಹದಗೆಟ್ಟಿತ್ತು.
ಈ ಬಾಗದ ಜನ ಹಲವು ವರ್ಷಗಳಿಂದ ತಮಗೊಂದು ರಸ್ತೆ ಮಾಡ್ಕೊಡಿ ಅಂತ ಜನ ಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಬೇಡಿಕೆ ಇಟ್ಟಿದ್ರು. ಅದರಂತೆ ಇದೀಗ ಶಾಸಕರ ಅನುದಾನದಲ್ಲಿ ಬರೋಬ್ಬರಿ ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ 2ಕಿಲೋ ಮೀಟರ್ ರಸ್ತೆ ಅಭಿವೃದ್ದಿಪಡಿಸಲಾಗಿದೆ. ಆದ್ರೆ ರಸ್ತೆಯಾಗಿ 1ತಿಂಗಳು ಕಳೆಯುವಷ್ಟ್ರಲ್ಲಿ ಕಳಪೆ ಕಾಮಗಾರಿಯ ನಿಜ ರೂಪ ಬಯಲಾಗಿದೆ. ಇದರಿಂದ ಗುತ್ತಿಗೆದಾರ ಮತ್ತು ಅಧಿಕಾರಿಗಳ ವಿರುದ್ಧ ಜನ ಆಕ್ರೋಶ ಹೊರಹಾಕುತ್ತಿದ್ದಾರೆ ಮುಂದಿನ ವಾರ ಗುಡ್ಡೆಟ್ಟಿ, ಹೊರಟ್ಟಿ, ಕುವೆಂಪುನಗರ ನಿವಾಸಿಗಳು ಕಳಪೆ ಕಾಮಗಾರಿ ವಿರುದ್ಧ ಹೋರಾಟ ಮಾಡಲು ಸಜ್ಜಾಗಿದ್ದಾರೆ
Banakal News ನಮ್ಮ ನಡೆ ರೋಚಕ ಸುದ್ದಿಯ ಕಡೆ