ಬಣಕಲ್ :ಸ.ಹಿ.ಪ್ರಾ.ಶಾಲೆ, ಮತ್ತಿಕಟ್ಟೆಯಲ್ಲಿ ಅವಿರತ ಟ್ರಸ್ಟ್ ವತಿಯಿಂದ ನೋಟ್ ಪುಸ್ತಕಗಳನ್ನು ವಿತರಣೆ ಮಾಡಲಾಯಿತು. ಟ್ರಸ್ಟ್ ಪರವಾಗಿ ಮಾತನಾಡಿದ ಪೂರ್ಣೇಶ್ ಮತ್ತಾವರ ಗ್ರಾಮೀಣ ಪ್ರದೇಶಗಳ ಮಕ್ಕಳ ಓದಿಗೆ ನೆರವಾಗುವ ನಿಟ್ಟಿನಲ್ಲಿ ಅವಿರತ ಟ್ರಸ್ಟ್ ನಾಡಿನಾದ್ಯಂತ 2009 ರಿಂದಲೂ ಉಚಿತ ನೋಟ್ ಪುಸ್ತಕ ವಿತರಣೆ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದೆ. ಇಲ್ಲಿಯವರೆಗೆ ಅವಿರತ ಟ್ರಸ್ಟ್ ವತಿಯಿಂದ 30 ಲಕ್ಷಕ್ಕೂ ಅಧಿಕ ನೋಟ್ ಪುಸ್ತಕಗಳನ್ನು ವಿತರಿಸಿದ್ದು ಇದರಿಂದಾಗಿ ಲಕ್ಷಾಂತರ ಗ್ರಾಮೀಣ ಮಕ್ಕಳ ಓದಿಗೆ ಅನುಕೂಲವಾಗುತ್ತಿದೆ ಎಂದರು.
ಟ್ರಸ್ಟ್ ನ ಪರವಾಗಿ ಸುನಿತಾ ನಟೇಶ್, ಅಶೋಕ್ ಮತ್ತಿಕಟ್ಟೆ, ಸುನಿಲ್, ರಂಜಿತ್ ಫಲ್ಗುಣಿ, ವಿಶ್ವನಾಥ್. ಎಚ್.ಎಂ, ರೇಖಾ ಪೂರ್ಣೇಶ್ ಪುಸ್ತಕಗಳನ್ನು ವಿತರಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ವಿಠ್ಠಲ, ಲಕ್ಷ್ಮಿ ವೆಂಕಟೇಶ್, ಮಂಜು, ಶಿಕ್ಷಕರಾದ ರಘು, ಪೋಷಕರು ಹಾಜರಿದ್ದರು.
Banakal News ನಮ್ಮ ನಡೆ ರೋಚಕ ಸುದ್ದಿಯ ಕಡೆ