ಫುಟ್ ಪಾತ್ ಅತಿಕ್ರಮಣ ರಸ್ತೆಯಲ್ಲೇ ಪಾದಚಾರಿ ಸಂಚಾರ:ತೆರವಿಗೆ ಆಗ್ರಹ

ಬಣಕಲ್: ಜನಸಂದಣಿ ಹೆಚ್ಚಿರುವ ನಗರದ ಪ್ರಮುಖ ರಸ್ತೆಗಳಲ್ಲಿ ಅಂಗಡಿ ಮಳಿಗೆಗಳು ಫುಟ್‌ಪಾತ್‌ ಅತಿಕ್ರಮಿಸಿವೆ. ಬಣಕಲ್ ನ ಬಹುತೇಕ ಅಂಗಡಿಗಳ ಮಾಲೀಕರು ಫುಟ್‌ಪಾತ್‌ಗಳಲ್ಲಿ ತಮ್ಮ ವ್ಯಾಪರ ವಿಸ್ತರಣೆ ಮಾಡಿದ್ದು, ಸಾಮಗ್ರಿಗಳನ್ನು ಪಾದಚಾರಿ ಮಾರ್ಗದಲ್ಲೇ ಪ್ರದರ್ಶನಕ್ಕಿಡಲಾಗುತ್ತಿದೆ. ನಗರದ ಬಹುತೇಕ ರಸ್ತೆಗಳಲ್ಲಿನ ಫುಟ್‌ಪಾತ್‌ಗಳು ಸಾರ್ವಜನಿಕರ ಪಾಲಿಗೆ ಇದ್ದೂ ಇಲ್ಲದಂತಾಗಿದೆ. ಅಂಗಡಿಗಳ ಸಾಮಗ್ರಿಗಳು, , ವಸ್ತುಗಳು, ಅಂಗಡಿಗಳ ವ್ಯಾಪಾರಕ್ಕೆ ಫುಟ್‌ಪಾತ್‌ಗಳು ಬಳಕೆಯಾಗುತ್ತಿವೆ.ಪಾದಚಾರಿ ರಸ್ತೆ ಪಾದಚಾರಿಗಳಿಗೆ ಮೀಸಲೇ ಹೊರತು ವ್ಯಾಪಾರಿಗಳಿಗೆ ಅಲ್ಲ ಎಂಬುದು ನಿಯಮ. ಆದರೆ ಅದು ಕಾಗದದಲ್ಲಷ್ಟೇ ಅಸ್ತಿತ್ವದಲ್ಲಿದೆ. ಹೀಗಾಗಿ ಪಾದಚಾರಿಗಳು ಮುಖ್ಯರಸ್ತೆಯಲ್ಲೇ ನಡೆಯಬೇಕು. ಈಗಷ್ಟೇ ಹೆದ್ದಾರಿ ಕಾಮಗಾರಿ ನಡೆದು ರಸ್ತೆ ವಿಸ್ತರಣೆ ಆಗಿದೆ ರಸ್ತೆ ಇಕ್ಕೆಲಗಳಲ್ಲಿ ವಾಹನಗಳನ್ನು ಎಲ್ಲೆಂದರಲ್ಲಿ ಅಡ್ಡಾದಿಡ್ಡಿಯಾಗಿ ನಿಲ್ಲಿಸಿರುತ್ತಾರೆ ಜನರು ರಸ್ತೆಯಲ್ಲಿ ನಡೆದುಕೊಂಡು ಹೋಗಲು ಸಾಧ್ಯವಾಗುವುದಿಲ್ಲ ಅತಿವೇಗವಾಗಿ ಹೋಗುವ ವಾಹನಗಳಿಂದ ಸಾರ್ವಜನಿಕರಿಗೆ ಅಪಾಯವಾಗುವ ಸಾಧ್ಯತೆ ಹೆಚ್ಚಿದೆ.ಅದರಿಂದ ಸಾರ್ವಜನಿಕರು ಫುಟ್ ಪಾತ್ ಅನ್ನೆ ಅವಲಂಬಿಸಬೇಕಾಗಿದೆ .ರಸ್ತೆಗಳು ವಿಸ್ತರಣೆಯಾದರೂ ಈ ಸನ್ನಿವೇಶ ಬದಲಾಗಿಲ್ಲ ಎಂಬುದೇ ವಿಪರ್ಯಾಸ ಆದಷ್ಟು ಬೇಗ ಸಂಬಂಧ ಪಟ್ಟ ಅಧಿಕಾರಿಗಳು ಇದರ ಬಗ್ಗೆ ಗಮನ ಹರಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ ಬಣಕಲ್ ಗ್ರಾಮ ಪಂಚಾಯಿತಿ ಪಿ.ಡಿ.ಓ. ಕೃಷ್ಣಪ್ಪ ಪತ್ರಿಕೆಯೊಂದಿಗೆ ಮಾತನಾಡಿ ಎಲ್ಲೆಲ್ಲಿ ಫುಟ್ ಪಾತ್ ಅನ್ನು ಅತಿಕ್ರಮಿಸಿದ್ದಾರೆ ಕೂಡಲೇ ಅದನ್ನು ತೆರವು ಗೊಳಿಸಲಾಗುವುದು ಪಾದಚಾರಿ ಮಾರ್ಗವನ್ನು ಸಾರ್ವಜನಿಕರಿಗೆ ತಿರುಗಾಡಲು ಅನುಕೂಲ ಮಾಡಿಕೊಡಲಾಗುವುದು ಎಂದರು