ಮೂಡಿಗೆರೆ :ಜಾತ್ಯಾತೀತ ಜನತಾದಳ ಪಕ್ಷದ ವತಿಯಿಂದ ರಾಜ್ಯಾದ್ಯಂತ ಜನತಾ ಜಲಧಾರೆ ಕಾರ್ಯಕ್ರಮ ಹಮ್ಮಿಕೊಂಡಿದ್ದು ಈ ಕಾರ್ಯಕ್ರಮದ ಅಂಗವಾಗಿ ಜನತಾ ಜಲಧಾರೆಯ ಯಾತ್ರೆರಥವನ್ನು ಜೆಡಿಎಸ್ ಪಕ್ಷದ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಎಚ್ ಡಿ ಕುಮಾರಸ್ವಾಮಿ ರವರ ಬಿಡದಿ ತೋಟದ ಮನೆಯಿಂದ ಜನತಾ ಜಲಧಾರೆ ಯಾತ್ರೆರಥವನ್ನು ಮೂಡಿಗೆರೆ ವಿಧಾನಸಭಾ ಕ್ಷೇತ್ರಕ್ಕೆ ಕರೆತರಲಾಯಿತು. ಈ ಜನತಾ ಜಲಧಾರೆ ಯಾತ್ರೆರಥದ ಸಂಪೂರ್ಣ ಜವಾಬ್ದಾರಿಯನ್ನು ಜೆಡಿಎಸ್ ಪಕ್ಷದ ನಾಯಕರಾದ . ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷರಾದ ರಂಜನ್ ಅಜಿತ್ ಕುಮಾರ್ ರವರು ವಹಿಸಿದ್ದರು ಜೆಡಿಎಸ್ ಪಕ್ಷದ ವಿದ್ಯಾರ್ಥಿ ಜನತಾದಳದ ರಾಜ್ಯ ಉಪಾಧ್ಯಕ್ಷರಾದ ಇಮ್ರಾನ್ ಬಣಕಲ್. ಎಸ್ಸಿ ಎಸ್ಟಿ ವಿಭಾಗದ ಕ್ಷೇತ್ರ ಸಮಿತಿ ಅಧ್ಯಕ್ಷರಾದ ಸುರೇಶ್ ಮಕೊನಹಳ್ಳಿ. ಅಲ್ಪಸಂಖ್ಯಾತರ ಘಟಕದ ಕ್ಷೇತ್ರ ಸಮಿತಿ ಅಧ್ಯಕ್ಷರಾದ ನಾಸೀರ್. ಅಲ್ಪಸಂಖ್ಯಾತರ ಟೌನ್ ಅಧ್ಯಕ್ಷರಾ ಆಸಿಫ್ ಬಾಪು ನಗರ. ಇವರ ಸಮ್ಮುಖದಲ್ಲಿ ಜನತಾ ಜಲಧಾರೆಯಾತ್ರೆ ರಥವನ್ನು ಮೂಡಿಗೆರೆ ವಿಧಾನಸಭಾ ಕ್ಷೇತ್ರಕ್ಕೆ ಕರೆತರಲಾಯಿತು.
Banakal News ನಮ್ಮ ನಡೆ ರೋಚಕ ಸುದ್ದಿಯ ಕಡೆ