ಅಂದ ಕುಟುಂಬಕ್ಕೆ ನೆರವು ನೀಡಿದ ಬಣಕಲ್ ಫ್ರೆಂಡ್ಸ್ ಕ್ಲಬ್ ಬಣಕಲ್

: ಬಣಕಲ್ ನಲ್ಲಿ ವಾಸವಿರುವ ಅಂದ ಕುಟುಂಬಕ್ಕೆ ಅವರ ಬೇಡಿಕೆಯಂತೆ ಗೃಹಪಯೋಗಿ ಗೀಸರ್ ಅನ್ನು ಫ್ರೆಂಡ್ಸ್ ಕ್ಲಬ್ ಸದಸ್ಯರು ಒದಗಿಸಿದ್ದಾರೆ.ಕುಟುಂಬದಲ್ಲಿ ಪತಿ ಪತ್ನಿ ಇಬ್ಬರು ಅಂದರಾಗಿದ್ದಾರೆ ಆದರಿಂದ ಅವರ ಕುಟುಂಬಕ್ಕೆ ತನ್ನ ಕೈಲಾದ ಸಣ್ಣ ನೆರವನ್ನು ನೀಡಿದೆ. ಬಣಕಲ್ ಫ್ರೆಂಡ್ಸ್ ಕ್ಲಬ್ ಎಂಬ ಸಂಸ್ಥೆ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುತ್ತಾ ಜನಸ್ನೇಹಿಯಾಗಿ ಜಿಲ್ಲೆಯಲ್ಲಿ ತನ್ನದೆ ಛಾಪನ್ನು ಹೊತ್ತಿದೆ.ಹೀಗೆ ಸಮಾಜ ಸೇವೆ ಮಾತ್ರವಲ್ಲದೆ ಕ್ರೀಡೆ ಇನ್ನಿತರ ಸಾಂಸ್ಕೃತಿಕ ಚಟುವಟಿಕೆಯಲ್ಲೂ ತನ್ನನ್ನು ತೊಡಗಿಸಿಕೊಂಡಿದೆ ಹಾಗೂ ಎಲೆಮರೆ ಕಾಯಿಯಂತೆ ಇರುವ ಹಲವಾರು ಸಮಾಜಸೇವಕರನ್ನು ಗುರುತಿಸಿ ಅವರಿಗೆ ಸನ್ಮಾನಿಸಿ ಪ್ರೋತ್ಸಾಹಿಸುವ ಕಾರ್ಯಕೂಡ ಮಾಡುತ್ತಿದೆ..ತನ್ನ ಕ್ಲಬ್ ನಿಂದ ಹಲವು ಕ್ರೀಡೆಗಳನ್ನು ನಡೆಸುತ್ತಾ ಅದರಿಂದ ಬಂದ ಮೊತ್ತವನ್ನು ಅನಾರೋಗ್ಯ ಪೀಡಿತರಿಗೆ ಹಾಗೂ ಕಡುಬಡವರಿಗೆ ನೇರವಾಗಲು ಉಪಯೋಗಿಸುತ್ತಿದ್ದಾರೆ. ನಮ್ಮ ಸುತ್ತಮುತ್ತಲಿರುವ ಜನರ ಅನುಕೂಲಕ್ಕಾಗಿ ಪ್ರತಿಫಲವನ್ನು ಬಯಸದೆ ಮಾಡುವ ಕೆಲಸ ಕಾರ್ಯಗಳೇ ಸಮಾಜ ಸೇವೆ ಎನಿಸಿಕೊಳ್ಳುತ್ತದೆ.ಅದು ಬಣಕಲ್ ಫ್ರೆಂಡ್ಸ್ ಕ್ಲಬ್ ನಿಂದ ಸಾಧ್ಯವಾಗಿದೆ.ಇದು ನಗರದ , ರಾಜ್ಯ ಮಟ್ಟದಲ್ಲೂ,ರಾಷ್ಟ್ರಮಟ್ಟದಲ್ಲೂ ಆಗಬಹುದು. ಈ ಮಟ್ಟಕ್ಕೆ ಎಲ್ಲರೂ ಏರಲು ಸಾಧ್ಯವಿಲ್ಲವಾದರೂ ಪ್ರತಿಯೊಬ್ಬರೂ ತಮ್ಮ ತಮ್ಮ ಯೋಗ್ಯತಾನುಸಾರ ಸಮಾಜ ಸೇವೆಯನ್ನು ಮಾಡಬಹುದಾಗಿದೆ.’ಜನಸೇವೆಯೇ ಜನಾರ್ಧನನ ಸೇವೆ’ ಎಂಬ ಗಾದೆಯು ಸಮಾಜ ಸೇವೆಯು ದೇವರ ಪೂಜೆಗಿಂತ ಶ್ರೇಷ್ಠ ಎಂಬುದನ್ನು ತಿಳಿಸುತ್ತದೆ. ಒಂದು ಕಾಲದಲ್ಲಿ ಸಮಾಜ ಸೇವಾಕರ್ತರೆಂದರೆ ಎಲ್ಲರೂ ಅವರನ್ನು ತುಂಬ ಪೂಜ್ಯಭಾವದಿಂದ ಕಾಣುತ್ತಿದ್ದರು. ಆದರೆ ಇಂದು ಸಮಾಜ ಸೇವಾಕರ್ತರೆನಿಸಿಕೊಂಡಿರುವವರಲ್ಲಿ ಬಹುಜನ ಸ್ವಾರ್ಥ ಮನೋಭಾವದವರಾಗಿರುವುದರಿಂದ ಸಮಾಜ ಸೇವಾಕರ್ತರಿಂದರೆ ಸಾರ್ವಜನಿಕರ ಹಣದಲ್ಲಿ ಐಷಾರಾಮದ ಜೀವನವನ್ನು ನಡೆಸುವವರೆಂಬ ಅರ್ಥ ಜನಜನಿತವಾತಗಿದೆ ಆದರೆ ಇದಕ್ಕೆ ತದ್ವಿರುದ್ದವಾಗಿ ಹಲವು ವರ್ಷಗಳಿಂದ ಜನ ಸೇವೆಯೆ ತನ್ನ ದ್ಯೇಯೇ ಎಂಬ ಗುರಿಯೊಂದಿಗೆ ಸಮಾಜಮುಖಿ ಕಾರ್ಯ ಮಾಡುತಿದ್ದಾರೆ ಬಣಕಲ್ ಫ್ರೆಂಡ್ಸ್ ಕ್ಲಬ್