ಸಬ್ಲಿ ವಾಲಿಬಾಲ್ ಲೀಗ್ ಪಂದ್ಯಾವಳಿ ಜೈ ಭೀಮ್ ತಂಡ ಪ್ರಥಮ

ಬಣಕಲ್ :ಜೈ ಭೀಮ್ ಸಬ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಲೀಗ್ ವಾಲಿಬಾಲ್ ಪಂದ್ಯಾವಳಿ ಬಣಕಲ್ ನ ಸಬ್ಳಿಗ್ರಾಮದಲ್ಲಿ ನಡೆಯಿತು.ಲೀಗ್ ಮಾದರಿ ಪಂದ್ಯದಲ್ಲಿ ಜೈ ಭೀಮ್ ತಂಡ ಪ್ರಥಮ ಬಹುಮಾನ ಪಡೆಯಿತು
ದ್ವಿತೀಯ ಬಹುಮಾನವನ್ನು ಅಬ್ದಾರೆ ಯುವರತ್ನ ಯೂನಿವರ್ಸ್ ತಂಡ ಪಡೆಯಿತು
ತೃತೀಯ ಬಹುಮಾನ ಹೊಯ್ಸಳಲು ಯುನಿವರ್ಸಲ್ ತಂಡ ಪಡೆಯಿತು
ಚತುರ್ಥ ಬಹುಮಾನ ಗವಿಕಲ್ ಕ್ಲಬ್ ಹಾನುಬಾಳು ತಂಡ ಪಡೆಯಿತು
ಅಲ್ರೌಂಡರ್ ಆಟಗಾರರಾಗಿ ರಾಕೇಶ್ ಬಾಳುರು ಪಡೆದರು
ಕಾರ್ಯಕ್ರಮದಲ್ಲಿ ಮಾಜಿ ತಾ. ಪಂ. ಸದಸ್ಯರಾದ ಎಸ್.ಬಿ.ದೇವರಾಜ್ ಸಬ್ಲಿ,ಆಯೋಜಕರಾದ ಪ್ರತಾಪ್, ಗ್ರಾ.ಪಂ.ಸದಸ್ಯರಾದ ಬಿ.ಎಂ. ಸುರೇಶ್, ಮಾಜಿ ಗ್ರಾ.ಪಂ.ಸದಸ್ಯರಾದ ಪ್ರಮೀಳ, ಶಿವರಾಜ್ ಎಸ್.ಬಿ, ಪವನ್, ಎಸ್.ಪಿ.,ಮಂಜುನಾಥ್, ಹೆಚ್.ಚಂದ್ರಪ್ಪ, ಚಂದ್ರಯ್ಯ, ಮಂಜಯ್ಯ, ರುದ್ರಯ್ಯ ಮುಂತಾದವರು ಉಪಸ್ಥಿತರಿದ್ದರು.