ಬಣಕಲ್ :ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿ.ಡಿ.ಓ.) ಕಾರ್ಯವೈಖರಿಗೆ ಜನ ಮೆಚ್ಚುಗೆ


ಬಣಕಲ್ :ಕಳೆದ ಒಂದು ವರ್ಷದಿಂದ ಬಣಕಲ್ ಮುಖ್ಯ ರಸ್ತೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿರುವ ಕಾರಣ ರಸ್ತೆಯ ಇಕ್ಕೆಲಗಳಲ್ಲಿ ಹಾದು ಹೋಗಿದ್ದ ಕುಡಿಯುವ ನೀರಿನ ಪೈಪ್ ಲೈನ್ ಕಡಿತಗೊಂಡ ಪರಿಣಾಮ ಜನ ಕುಡಿಯುವ ನೀರಿಗೆ ಪರದಾಡುವ ಸ್ಥಿತಿ ನಿರ್ಮಾಣ ಗೊಂಡಿತ್ತು.ಜನ ಪ್ರತಿನಿಧಿಗಳ ಗಮನಕ್ಕೆ ತಂದರೂ ಮೊದಲ ಕೆಲ ದಿನ ತೋರಿಸಿದ ಮುತುವರ್ಜಿ ನಂತರದ ದಿನಗಳಲ್ಲಿ ತೊರ್ಪಡಿಸಲಿಲ್ಲ ತದನಂತರದ ದಿನಗಳಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ನಡೆಯಿತು.. ಜನಪ್ರತಿನಿದಿನಗಳು ತಮ್ಮ ತಮ್ಮ ಚುನಾವಣ ಕ್ಷೇತ್ರ ಗಳತ್ತ ಗಮನ ಕೇಂದ್ರಿಕರಿಸಿದರು.ರಸ್ತೆ ಕಾಮಗಾರಿ ಕುಂಟುತ್ತಾ ಸಾಗಿದರು ಅಧಿಕಾರಿಗಳ ಮೇಲೆ ಒತ್ತಡಹಾಕುವ ಕೆಲಸ ಯಾವೊಬ್ಬ ಜನಪ್ರತಿನಿದಿನಗಳು ಮಾಡಲಿಲ್ಲ. ಇದರಿಂದ ಜನ ಕುಡಿಯುವ ನೀರಿಗೆ ಪರದಾಡುವ ಸ್ಥಿತಿ ನಿರ್ಮಾಣ ಗೊಂಡಿತ್ತು.ಮನೆಗಳಲ್ಲಿ ಬಾವಿಯ ಸೌಕರ್ಯ ಇರುವ ಅನುಕೂಲಸ್ಥರಿಗೆ ನೀರಿನ ಭವಣೆ ತಿಳಿಯಲಿಲ್ಲ ಆದರೆ ನಲ್ಲಿಯ ನೀರನ್ನೇ ನಂಬಿರುವ ಜನ ಸಾಮನ್ಯರ ಸ್ಥಿತಿ ಅದೋಗತಿಯಾಗಿತ್ತು.. ಆಟೋ ಮಾಡಿಕೊಂಡು ಕಿಲೋಮೀಟರ್ ಗಟ್ಟಲೆ ಹೋಗಿ ನೀರನ್ನು ತರುವ ದೃಶ್ಯ ಸರ್ವೇಸಾಮಾನ್ಯವಾಗಿತ್ತು.. ಕುಡಿಯುವ ನೀರಿಗಾಗಿ ಜನ ಪಡುತ್ತಿರುವ ಕಷ್ಟ ತಮ್ಮ ಗಮನಕ್ಕೆ ಬಂದ ತಕ್ಷಣ ಬಣಕಲ್ ಗ್ರಾಮ ಪಂಚಾಯಿತಿ ಪಿ.ಡಿ.ಓ. ಕೃಷ್ಣಪ್ಪ ರವರು ಆ ಭಾಗದ ವಾಟರ್ ಮ್ಯಾನ್ ಗೆ ಜನರಿಗೆ ನೇರವಾಗಲು ತಾತ್ಕಾಲಿಕ ನೀರಿನ ವ್ಯವಸ್ಥೆಗೆ ತಿಳಿಸಿದರು.ಅದರಂತೆ ಗ್ರಾಮ ಪಂಚಾಯಿತಿಲ್ಲಿರುವ ಟ್ಯಾಂಕರ್ ಮೂಲಕ ಕಳೆದ 6ತಿಂಗಳಿನಿಂದ ವಾರಕ್ಕೆ ಎರಡು ಭಾರಿ ಅಂತೆ ಮನೆ ಮನೆಗೆ ನೀರನ್ನು ಒದಗಿಸುವ ವ್ಯವಸ್ಥೆ ಮಾಡಿದರು. ಪಿ.ಡಿ.ಓ. ಕೃಷ್ಣಪ್ಪ ರ ಕಾರ್ಯ ವೈಖರಿಗೆ ಜನ ಮೆಚ್ಚುಗೆ ಸೂಚಿಸಿದ್ದಾರೆ .. ಜನರಿಗೆ ಕುಡಿಯುವ ನೀರಿಗೆ ಯಾವುದೇ ರೀತಿಯಲ್ಲಿ ತೊಂದರೆ ಆಗದ ರೀತಿ ಕರ್ತವ್ಯ ನಿರ್ವಹಿಸಿರುವುದನ್ನು ಕಂಡು ಬಣಕಲ್ ನಾಗರಿಕರು ಹೆಮ್ಮೆವ್ಯಕ್ತಪಡಿಸಿದ್ದಾರೆ..ಯಾವುದೇ ಸಮಯದಲ್ಲಿ ನೀವು ನನಗೆ ಕರೆ ಮಾಡಿದರೂ ನಿಮ್ಮ ಸಮಸ್ಯೆಗೆ ಸ್ಪಂದಿಸುತ್ತೇನೆ ಎಂದು ಭರವಸೆ ನೀಡಿದ್ದರು ಅದರಂತೆ ಕಳೆದ 7ತಿಂಗಳುಗಳಿಂದ ಬಣಕಲ್ ನ ಸಾರ್ವಜನಿಕರಿಗೆ ಗ್ರಾಮ ಪಂಚಾಯಿತಿ ವತಿಯಿಂದ ತಾತ್ಕಾಲಿಕವಾಗಿ ಟ್ಯಾಂಕರ್ ಮೂಲಕ ನೀರನ್ನು ಮನೆ ಮನೆಗೆ ತಲುಪಿಸುವ ವ್ಯವಸ್ಥೆ ಮಾಡಿ ಜನರಿಗೆ ನೀರಿನ ಭರವನ್ನು ನಿಗಿಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದಾರೆ ಬಣಕಲ್ ಗ್ರಾ.ಪ. ಪಿ,ಡಿ,ಓ ಕೃಷ್ಣಪ್ಪ ರ ಕಾರ್ಯವೈಖರಿ ಜನ ಮೆಚ್ಚುಗೆಗೆ ಪಾತ್ರ ವಾಗಿದ್ದಾರೆ.

Sahifa Theme License is not validated, Go to the theme options page to validate the license, You need a single license for each domain name.