ಹೊಸಹಳ್ಳಿ,ಭಾರತಿಭೈಲ್,ಹೊಕ್ಕಳ್ಳಿ ಗ್ರಾಮಗಳ ಸುತ್ತ ಕಳೆದ 6 ತಿಂಗಳಿಂದ ಹುಲಿಗಳು ಪ್ರತ್ಯಕ್ಷವಾಗಿದ್ದು ಈಗಾಗಲೇ 30 ರಿಂದ 4೦ ಜಾನುವಾರುಗಳನ್ನು ಕೊಂದು ತಿಂದಿದೆ. ಪುಣ್ಯಕೋಟಿಯ ರಕ್ತದ ರುಚಿಯನ್ನು ನೋಡಿರುವ ಹುಲಿಯು ಈಗ ಮನೆಗಳ ವರೆಗೂ ಬರುತ್ತಿದೆ. ಮಕ್ಕಳು, ರೈತರು,ವಯಸ್ಕರರು ಕಾರ್ಮಿಕರು, ಜೀವ ಭಯದಿಂದ ಹೊರಗೆ ಬರಲು ಹೆದರುವಂತಾಗಿದೆ.ಈಗಾಗಲೇ ಸರ್ಕಾರಕ್ಕೆ ಹಾಗೂ ಇಲಾಖೆಗೆ ಗ್ರಾಮಸ್ಥರು ಮನವಿ ಸಲ್ಲಿರುಸುತ್ತಾರೆ. ಆಧಷ್ಠು ಬೇಗ ಹುಲಿಯನ್ನು ಸೆರೆ ಹಿಡಿದು ಧಟ್ಟ ಅರಣ್ಯಕ್ಕೆ ಬಿಟ್ಟು ಮುಂದೆ ನಡೆಯುವ ಆನಾಹುತಗಳನ್ನು ತಪ್ಪಿಸಬೇಕಾಗಿದೆ
Banakal News ನಮ್ಮ ನಡೆ ರೋಚಕ ಸುದ್ದಿಯ ಕಡೆ