ಬಣಕಲ್ ನ ಶ್ರೀ ವಿದ್ಯಾಭಾರತಿ ವಿದ್ಯಾಸಂಸ್ಥೆ (ರಿ) ಯಲ್ಲಿ ಅರ್ಥಪೂರ್ಣ “ವಿಶ್ವ ಪರಿಸರ ದಿನಾಚರಣೆ“: ಶಿಕ್ಷಕರಿಂದ ಮಕ್ಕಳಿಗೆ ವೃಕ್ಷಮಾತೆ ಸಾಲುಮರದ ತಿಮ್ಮಕ್ಕನವರ ಪರಿಸರ ಪ್ರೇಮದ ಪಾಠ


ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕಿನ ಬಣಕಲ್ ನ ಶ್ರೀ ವಿದ್ಯಾಭಾರತಿ ವಿದ್ಯಾಸಂಸ್ಥೆ (ರಿ) ಯಲ್ಲಿ 05:06:2026ರ ಶುಕ್ರವಾರ “ವಿಶ್ವ ಪರಿಸರ ದಿನಾಚರಣೆ”ಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.


ಈ ಸಂದರ್ಭದಲ್ಲಿ ಮಾತನಾಡಿದ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಬಿ.ಶಿವರಾಮ ಶೆಟ್ಟಿ, ಪ್ರಸ್ತುತ ಆಧುನಿಕ ಯುಗದಲ್ಲಿ ನಮ್ಮ ಜೀವನ ಕ್ರಮದಿಂದ ಪರಿಸರ ಮಾಲಿನ್ಯಕ್ಕೆ ದಾರಿಯಾಗಿದೆ ಪ್ರತಿಯೊಬ್ಬರ ಮನಸ್ಸಿನಿಂದ ಹಾಗೂ ತಾವು ವಾಸಿಸುವ ಮನೆಯಿಂದಲೇ ಪರಿಸರಪ್ರಜ್ಞೆ ಮೂಡಬೇಕು ಎಂದರು.
ವಿಜ್ಞಾನ ವಿಷಯದ ಶಿಕ್ಷಕಿ ಶ್ರೀಮತಿ ಸಾಯಿ ಕೀರ್ತನಾ ಮಾತನಾಡಿ ಪರಿಸರ ದಿನಾಚರಣೆಯ ಮಹತ್ವ ಮತ್ತು ಪರಿಸರದ ಅಗತ್ಯತೆ ಹಾಗೂ ಸಂರಕ್ಷಣಾ ಕ್ರಮಗಳನ್ನು ತಿಳಿಸಿಕೊಟ್ಟರು. ಸಹಶಿಕ್ಷಕ ಅಶ್ವತ್ ಪರಿಸರ ಸಂರಕ್ಷಣೆಯಲ್ಲಿ ವೃಕ್ಷಮಾತೆ ಸಾಲುಮರದ ತಿಮ್ಮಕ್ಕನವರ ಕೊಡುಗೆ ಮತ್ತು ಅವರ ಪರಿಸರ ಪ್ರೇಮವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರೌಢಶಾಲಾ ವಿಭಾಗದ ಮುಖ್ಯಶಿಕ್ಷಕಿ ಟಿ.ಆರ್.ಮಾಲತಿ. ಪ್ರಾಥಮಿಕ ವಿಭಾಗದ ಮುಖ್ಯಶಿಕ್ಷಕ ಸಿ.ನಾಗರಾಜು. ಉಪಮುಖ್ಯಶಿಕ್ಷಕ ವಸಂತ್ ಹಾರ್ಗೋಡು.ಶಿಕ್ಷಕರಾದಭಕ್ತೇಶ್.ವಿಜಯೇಂದ್ರ.
ಲಿಂಗರಾಜು.ಪ್ರತಾಪ್.ಲೋಕೇಶ್.ದೈಹಿಕ ಶಿಕ್ಷಣ ಶಿಕ್ಷಕ ಜಯಪಾಲ್.ನೃತ್ಯಶಿಕ್ಷಕಕಿಶೋರ್.ಲೀಲಾಮಣಿ.ಶ್ವೇತಾ.
ಕನ್ನಿಕ.ಕುಸುಮ.ಎಸ್.ಶೆಟ್ಟಿ.ಗೀತಾ.ಅಶ್ವಿತಾ.ಆಶಾ.ಪೂಜಾ.ಅನುಷ.ಆರೋಗ್ಯವಾಣಿ.ಚಂದನ.ಪ್ರೀತಿ.ಶಾಲಾ ಬೋಧಕೇತರ ಸಿಬ್ಬಂದಿ.ಅಡುಗೆ ಸಿಬ್ಬಂದಿ.ಪೋಷಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.