ಬಣಕಲ್ :ಬಣಕಲ್ ನ ವನಶ್ರೀ ಲಕ್ಷ್ಮಣ್ ಗೌಡ ಅವರು ಉತ್ತಮ ರೈತ ಮಹಿಳೆ ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ,ಪರಿಶ್ರಮಪಟ್ಟರೆ ತಕ್ಕ ಪ್ರತಿಫಲ ಇದ್ದೇ ಇರುತ್ತದೆ ಎಂಬುದಕ್ಕೆ ವನಶ್ರೀ ಲಕ್ಷ್ಮಣ್ ಗೌಡ ಅವರು ಪ್ರೇರಣೆಯಾಗಿದ್ದಾರೆ.ರೈತ ಸಂಘದ ರಾಜ್ಯ ಮಹಿಳಾ ಉಪಾಧ್ಯಕ್ಷೆಯಾಗಿರುವ ಜಿ. ಆರ್. ವನಶ್ರೀ ಲಕ್ಷ್ಮಣ್ ಗೌಡ ಅವರ ಉತ್ತಮ ಕೃಷಿಯನ್ನು ಪರಿಗಣಿಸಿ ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕ ವಿಜ್ಞಾನಗಳ ವಿಶ್ವ ವಿದ್ಯಾಲಯ ನೀಡುವ ಪ್ರಶಸ್ತಿಗೆ ವನಶ್ರೀಅವರು ಆಯ್ಕೆ ಆಗಿರುವುದು ಬಣಕಲ್ ನಾಗರಿಕರಿಗೆ ಹೆಮ್ಮೆಯ ಅಭಿಮಾನ, ಕೃಷಿ ಕ್ಷೇತ್ರದಲ್ಲಿ ಸಾಧನೆಗಳನ್ನು ಮಾಡಿರುವ ವನಶ್ರೀ ಅವರು, ಈ ವರ್ಷದ ಅತ್ಯುತ್ತಮ ರೈತ ಮಹಿಳೆ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ಬರಡು ಭೂಮಿಯಾಗಿದ್ದ ಭೂಮಿಯನ್ನು ವನಶ್ರೀ ಅವರು ಫಲವತ್ತಾದ ನೆಲವಾಗಿ ಬದಲಾಯಿಸಿದ್ದಾರೆ,ಇದೀಗ ಆ ಭೂಮಿಯಲ್ಲಿ ಹಲವು ಬೆಳೆಗಳನ್ನು ಬೆಳೆಯುತ್ತಿದ್ದಾರೆ ಕೃಷಿ ಬಗ್ಗೆ ಅವರಿಗೆ ಇರುವ ಕಾಳಜಿ ಓರ್ವ ಮಹಿಳೆ ಯಾಗಿ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವುದನ್ನು ಗುರುತಿಸಿ ಅವರಿಗೆ ಅತ್ಯುತ್ತಮ ರೈತ ಪ್ರಶಸ್ತಿ ದೊರಕಿರುವುದು ಸ್ವಾಗತಾರ್ಹ…