ಬಸ್- ಬೈಕ್ ನಡುವೆ ಭೀಕರ ಅಪಘಾತ: ಸ್ಥಳದಲ್ಲಿಯೇ ಸಾವನ್ನಪ್ಪಿದ ಯುವಕ

ಬಸ್ ಮತ್ತು ಬೈಕ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಒಬ್ಬ ಯುವಕ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಬಣಕಲ್ ನ ದಾಸರಹಳ್ಳಿಯಲ್ಲಿ ನಡೆದಿದೆ

ದಾಸರಹಳ್ಳಿಯ ಗ್ರಾಮದ ಅಶೋಕ (30)ಎಂಬುವವರು ಗಾಯಗೊಂಡರೆ ಸುಂದರ್ ಬೈಲ್ ನ ರಾಜೇಶ (25)ಮೃತ ದುರ್ದೈವಿಯಾಗಿದ್ದಾರೆ .ಮತ್ತಿಕಟ್ಟೆ ಯಿಂದ ಬಣಕಲ್ ಕಡೆಗೆ ಬರುತಿದ್ದ ಬಸ್ ದಾಸರಹಳ್ಳಿ ಗೆ ತೆರಳುತ್ತಿದ್ದ ಬೈಕ್ ನಡುವೆ ಅಪಘಾತ ಸಂಭವಿಸಿದೆ ಬೈಕ್ ಸವಾರನ ನಿಯಂತ್ರಣ ತಪ್ಪಿ ಆಯತಪ್ಪಿ ಬಿದ್ದು ಬಸ್ಸಿನ ಟೈರ್ ಗೆ ತಲೆ ಸಿಲುಕಿ ಛಿದ್ರವಾಗಿದೆ ಇನ್ನೊರ್ವ ಸಾವು ಬದುಕಿನ ನಡುವೆ ಹೋರಾಟ ನಡೆಸು ತ್ತಿದ್ದಾರೆ,ಎಂದು ಮೂಲಗಳಿಂದ ತಿಳಿದು ಬಂದಿದೆ,. ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.