100 ಬೆಡ್ ಆಸ್ಪತ್ರೆಗೆ ಒತ್ತಾಯಿಸಿ ಅಕ್ಟೊಬರ್ 22 ರಂದು ಶೃಂಗೇರಿ ಬಂದ್!

ಚಿಕ್ಕಮಗಳೂರು :ಶ್ರೀ ಶಾರದಾ ದೇವಿ ನೆಲೆ ಬೀಡಾದ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಪಟ್ಟಣದಲ್ಲಿ ಸುಸಜ್ಜಿತ ನೂರು ಬೆಡ್ ಆಸ್ಪತ್ರೆಗೆ ಒತ್ತಾಯಿಸಿ ಅಕ್ಟೊಬರ್ 22ರಂದು ಶೃಂಗೇರಿ ಬಂದ್ ಗೆ ನೂರು ಬೆಡ್ ಆಸ್ಪತ್ರೆ ಹೋರಾಟ ಸಮಿತಿ ಕರೆ ನೀಡಿದೆ ಕಳೆದ 14ವರ್ಷಗಳ ಬೇಡಿಕೆ ಹಾಗೂ ಕಳೆದ 1 ವರ್ಷ 3 ತಿಂಗಳಿನ ನಿರಂತರ ಪ್ರಯತ್ನದ ನಂತರವೂ ಶೃಂಗೇರಿ ನೂರು ಬೆಡ್ ಆಸ್ಪತ್ರೆ ಪ್ರಕ್ರಿಯೆ ಪೂರ್ಣಗೊಂಡಿಲ್ಲ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಸುಳ್ಳು ಭರವಸೆ ನೀಡಿದರೆ ಹೊರತು ಇದುವರೆಗೆ ಕೂಡ ಆಸ್ಪತ್ರೆ ನಿರ್ಮಾಣ ಸಂಬಂಧ ಯಾವುದೇ ಪ್ರಕ್ರಿಯೆ ಆರಂಭವಾಗಿಲ್ಲ.

ಹೋರಾಟದ ಮೊದಲನೇ ಭಾಗವಾಗಿ ಕೋವಿಡ್ ಕಾರಣದಿಂದ ಸಾಮಾಜಿಕ ಜಾಲತಾಣಗಳಲ್ಲಿ ನಾವೆಲ್ಲರೂ ರಾಜಕೀಯೇತರವಾಗಿ ಹೋರಾಟ ನಡೆಸಿದ್ದು ನಂತರದಲ್ಲಿ ಕಳೆದ ಒಂದು ವರ್ಷದಿಂದ ಎಲ್ಲಾ ಅಧಿಕಾರಿಗಳು,ಹಾಗೂ ಜನಪ್ರತಿನಿಧಿಗಳನ್ನು ಭೇಟಿಯಾಗಿ ಹಲವು ಬಾರಿ ಮನವಿ ಸಲ್ಲಿಸುತ್ತಾ ಬಂದಿದ್ದೇವೆ. ಆದರೂ ಸುಸಜ್ಜಿತ ಆಸ್ಪತ್ರೆ ಮನವಿ ಬೇಡಿಕೆ ಈಡೇರಿಲ್ಲ. ಈ ಕಾರಣ ಹೋರಾಟವನ್ನು ತಾರ್ಕಿಕ ಹಂತಕ್ಕೆ ತೆಗೆದುಕೊಂಡು ಹೋಗುವ ಉದ್ಧೇಶದಿಂದ, ಹೋರಾಟದ ಮುಂದಿನ ಭಾಗದ ರೂಪುರೇಷೆಗಾಗಿ ಎಲ್ಲರೂ ಸೇರಿ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲು ಸಭೆ ಆಯೋಜಿಸಿದ್ದು. ಸಾಮಾಜಿಕ ಕಳಕಳಿಯುಳ್ಳ ಎಲ್ಲಾ ಸಾರ್ವಜನಿಕರು ಇದರಲ್ಲಿ ಭಾಗಿಯಾಗಬೇಕು ಎಂದು ನೂರು ಬೆಡ್ ಆಸ್ಪತ್ರೆ ಹೋರಾಟ ಸಮಿತಿ ಮನವಿ ಮಾಡಿದೆ. ಸ್ಥಳಕ್ಕೆ ಖುದ್ದು ಜಿಲ್ಲಾಧಿಕಾರಿಗಳು ಬರುವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ , ಶೃಂಗೇರಿ ಪಟ್ಟಣದಲ್ಲಿ ಕೂಡಲೇ ಸುಸಜ್ಜಿತ ನೂರು ಬೆಡ್ ಆಸ್ಪತ್ರೆ ನಿರ್ಮಾಣ ಸಂಬಂಧ ಜನಪ್ರತಿನಿಧಿಗಳು, ಸಚಿವರು, ಶಾಸಕರು ತುರ್ತಾಗಿ ಗಮನ ಹರಿಸಬೇಕೆಂದು ಸಮಿತಿ ಆಗ್ರಹಿಸಿದೆ.

‘ ಅಕ್ಟೋಬರ್ 22 ರಂದು ಶೃಂಗೇರಿಯ ಸುಸಜ್ಜಿತ ಸರ್ಕಾರಿ ಆಸ್ಪತ್ರೆ ಹೋರಾಟ ಸಮಿತಿ ಕರೆನೀಡಿರುವ ಶೃಂಗೇರಿ ಬಂದ್ ಗೆ ಒಬ್ಬ ವೈದ್ಯನಾಗಿ ನಾನು ನನ್ನ ಸಂಪೂರ್ಣ ಬೆಂಬಲವನ್ನು ನೀಡುತ್ತಿದ್ದೇನೆ. ಮಲೆನಾಡು ಭಾಗದ ಜನರು ಒಂದೆಡೆ ತಮ್ಮ ಅಡಿಕೆ ತೋಟಗಳಿಗೆ ಬಂದಿರುವ ರೋಗವನ್ನು ನಿಯಂತ್ರಣಕ್ಕೆ ತರಲಾರದೆ ಒದ್ದಾಡುತ್ತಿದ್ದರೆ ಇನ್ನೊಂದೆಡೆ ತುರ್ತು ಅವಶ್ಯಕವಾದ ಸಂದರ್ಭದಲ್ಲಿ ಸುಸಜ್ಜಿತ ಆಸ್ಪತ್ರೆ ಸಿಗದೇ ತಮ್ಮವರನ್ನು ಕಳೆದುಕೊಂಡ ನೋವಿನಲ್ಲಿದ್ದಾರೆ. ಈ ಕುರಿತಾಗಿ ಅದೆಷ್ಟೋ ನಿದರ್ಶನಗಳು ನಮ್ಮ ಕಣ್ಣೆದುರಿನಲ್ಲಿಯೇ ಇದೆ. ಜನಪ್ರತಿನಿಧಿಗಳು ಶೀಘ್ರವಾಗಿ ಶೃಂಗೇರಿ ಹಾಗೂ ಸುತ್ತಮುತ್ತಲಿನ ಊರುಗಳ ಜನರ ಪ್ರಸ್ತುತ ಸನ್ನಿವೇಶವನ್ನು ಅರಿತು ಮುಂದಿನ ದಿನಗಳಲ್ಲಿ
ಸುಸಜ್ಜಿತವಾದ ನೂರು ಬೆಡ್ ಆಸ್ಪತ್ರೆಯನ್ನು ಜನಸಾಮಾನ್ಯರಿಗೆ ಕಲ್ಪಿಸಿಕೊಡಬೇಕೆಂದು ಈ ಮೂಲಕ ಕೋರುತ್ತೇನೆ’. – ಡಾ. ಅಣ್ಣಾದೊರೆ ಕೆ ಸಿ, ವೈದ್ಯರು, ಶೃಂಗೇರಿ

ಬಂದ್ ಗೆ ಆಟೋ ಚಾಲಕರ ಬೆಂಬಲ

ದಿ 22/10/21 ಶುಕ್ರವಾರ 100 ಬೆಡ್ ಹಾಸ್ಪಿಟಲ್ ನಿರ್ಮಾಣಕ್ಕಾಗಿ ಆಸ್ಪತ್ರೆ ನಿರ್ಮಾಣ ಹೋರಾಟ ಸಮಿತಿ ಕರೆ ಕೊಟ್ಟಿರುವ ಶೃಂಗೇರಿ ಬಂದ್ ಗೆ ಆಟೋ ಚಾಲಕರ ಸಂಘವು ಸಂಪೂರ್ಣ ಬೆಂಬಲ ನೀಡಿದೆ. 22 ನೆ ತಾ ಬೆಳಿಗ್ಗೆ 8 ರಿಂದ ಮಧ್ಯಾಹ್ನ 3 ರ ವರೆಗೆ ನಮ್ಮ ಆಟೋಗಳನ್ನ ಸಂಪೂರ್ಣವಾಗಿ ನಿಲ್ಲಿಸುವುದರ ಮುಖಾಂತರ ಒಳ್ಳೆಯ ವಿಚಾರಕ್ಕೆ ಬೆಂಬಲವಾಗಿ ನಿಲ್ಲುವುದೇಂದು ನಮ್ಮ ಸಂಘದ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ನಡೆದ ತುರ್ತು ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಶೃಂಗೇರಿ ಆಸ್ಪತ್ರೆ ಹೋರಾಟ ಸಮಿತಿ ಕರೆ ಕೊಟ್ಟಿರುವ ಬಂದ್ ಗೆ ತಾಲೂಕು ಜೆಡಿಎಸ್ ಸಂಪೂರ್ಣ ಬೆಂಬಲ ಘೋಷಿಸಿದೆ.

ಅಕ್ಟೋಬರ್ 22 ರಂದು ಶೃಂಗೇರಿಗೆ ಸುಸಜ್ಜಿತ ನೂರು ಬೆಡ್ ಆಸ್ಪತ್ರೆಗೆ ಒತ್ತಾಯಿಸಿ ಸ್ವಯಂ ಪ್ರೇರಿತ ಶೃಂಗೇರಿ_ಬಂದ್ ಗೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಶೃಂಗೇರಿ ಬಿಲ್ಲವ ಸಮಾಜದ ಅಧ್ಯಕ್ಷರಾದ NHP ಭಾಸ್ಕರ್ ರವರು ತಿಳಿಸಿದ್ದಾರೆ.