ಜಾವಳಿ: ಪ್ರವಾಸೋದ್ಯಮ ಇಲಾಖೆ ಸಚಿವರಾಗಿದ್ದಾಗ ಸಿ.ಟಿ.ರವಿ ಅವರು ಜಾವಳಿ ಹೇಮಾವತಿ ನದಿ ಮೂಲ ಮಹಾ ಗಣಪತಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ 50 ಲಕ್ಷ ಅನುಧಾನವನ್ನು ನೀಡಿದ್ದರು, ಇಂದು ದೇವಸ್ಥಾನ ನಿರ್ಮಾಣ ಕಾರ್ಯ ಆರಂಭವಾಗಿದ್ದು ವಿಧಾನ ಪರಿಷತ್ ಉಪ ಸಭಾಪತಿಗಳಾದ ಎಂ.ಕೆ.ಪ್ರಾಣೇಶ್ ಅವರು ಇಂದು ದೇವಸ್ಥಾನಕ್ಕೆ ಭೇಟಿ ನೀಡಿ ನಿರ್ಮಾಣ ಕಾರ್ಯವನ್ನು ವೀಕ್ಷಿಸಿದರು
ನಂತರ ಮಾತನಾಡಿದ ಅವರು ಹೇಮಾವತಿ ನದಿ ರಾಜ್ಯದ ರೈತರಿಗೆ ಜೀವನಾಡಿ ಆಗಿದ್ದು ,ಈ ನದಿ ನಮ್ಮ ತಾಲೂಕಿನಲ್ಲಿ ಉಗಮವಾಗುತ್ತಿರುವುದು ನಮ್ಮ ಹೆಮ್ಮೆ, ಈ ಸ್ಥಳ ಬಹಳ ದೊಡ್ಡ ಪ್ರವಾಸಿಗರ ತಾಣವಾಗಲಿದೆ,ಮುಂದೆಯೂ ಸಹ ಈ ಸ್ಥಳಕ್ಕೆ ಸರ್ಕಾರದಿಂದ ಅನುಧಾನ ಕೊಡಿಸುತ್ತೆನೆ ಎಂದರು ದೇವಸ್ಥಾನದ ಕಾರ್ಯದರ್ಶಿ ಜಗದೀಶ್ ಗೌಡ,
ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ಶಶಿಧರ್, ಪರೀಕ್ಷಿತ್ ಜಾವಳಿ,ನಿವ್ರತ್ತ ಉಪತಹಶಿಲ್ದಾರ್ ಗಣಪತಿ ಆಚಾರ್ ಶಶಿಕುಮಾರ್, ಮುಂತಾದವರಿದ್ದರು
Banakal News ನಮ್ಮ ನಡೆ ರೋಚಕ ಸುದ್ದಿಯ ಕಡೆ