ಚಿಕ್ಕಮಗಳೂರು: ತಾಲ್ಲೂಕಿನ ಮಲ್ಲೆದೇವರಹಳ್ಳಿ ಬಳಿ ಆಟೊ ರಿಕ್ಷಾ ಮತ್ತು ಟಾಟಾ ಏಸ್ ವಾಹನ ಡಿಕ್ಕಿಯಾಗಿ ರಿಕ್ಷಾ ಚಾಲಕ ಮನು (22) ಸಾವಿಗೀಡಾಗಿದ್ದಾರೆ.
ಮನು ಅವರು ಚಿಕ್ಕಮಗಳೂರು ಕೋಟೆ ಬಡಾವಣೆಯವರು.
ಚಿಕ್ಕಮಗಳೂರಿನಿಂದ ಮಾಗಡಿ ಕಡೆಗೆ ಸಾಗುತ್ತಿದ್ದ ಟಾಟಾ ಏಸ್ ವಾಹನ ಮತ್ತು ಮಾಗಡಿ ಕಡೆಯಿಂದ ಚಿಕ್ಕಮಗಳೂರಿಗೆ ಚಲಿಸುತ್ತಿದ್ದ ರಿಕ್ಷಾ ಡಿಕ್ಕಿ ಹೊಡೆದಿದೆ.
ಎರಡೂ ವಾಹನಗಳು ಜಖಂ ಆಗಿವೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Banakal News ನಮ್ಮ ನಡೆ ರೋಚಕ ಸುದ್ದಿಯ ಕಡೆ