ಪಂಚಾಂಯಿತಿ ಉಪಾಧ್ಯಕ್ಷರಾದ ನವೀನ್ ಹಾವಳಿ ಯಿಂದ ಬಸ್ ತಂಗುದಾಣ ನವೀಕರಣ

ನೀಡುವಾಳೆ ಪಂಚಾಯಿತಿ ಉಪಾಧ್ಯಕ್ಷರಾದ ನವೀನ್ ಹಾವಳಿ ಉಪಾಧ್ಯಕ್ಷರ ಸ್ಥಾನಕ್ಕೆ ಸರ್ಕಾರದಿಂದ ಬಂದ ಗೌರವಧನದಿಂದ ಮರ್ಕಲ್ ಬಸ್ ತಂಗುದಾಣವನ್ನು ಸ್ವಚ್ಛಗೊಳಿಸಿ ಬಣ್ಣಬಳಿದು ನವೀಕರಿಸಿದರು ಸಾರ್ವಜನಿಕರಿಂದ ಬಂದಂತಹ ಗೌರವಧನವನ್ನು ಸಾರ್ವಜನಿಕ ತಂಗುದಾಣಕ್ಕೆ ಬಳಸಿ ಮಾದರಿಯಾದರು ತಮ್ಮ ಸ್ನೇಹಿತರ ಜೊತೆಗೂಡಿ ತಾವು ಕೈ ಜೋಡಿಸಿದರು ಈ ಸಂದರ್ಭದಲ್ಲಿ ಸ್ನೇಹಿತರಾದ ಸಂದೇಶ ಮಂಜುನಾಥ ಅರುಣಾ ಸಂದೀಪ್ ರತನ್ ಭರತ್ ಸಚಿನ್ ಯಶವಂತ ಸುಬ್ರಾಯ ಜೀವನ್ ಪ್ರವೀಣ್ ಸಾಗರ್ ರಮಿತ್ ಹಾಜರಿದ್ದರು.

ಲೂಟಿ ಮಾಡಲೆಂದೆ ಬರುವ ಜನಪ್ರತಿನಿಗಳ ನಡುವೆ ನವೀನ್ ಹಾವಳಿ ಭಿನ್ನವಾಗಿ ಕಾಣುತ್ತಾರೆ.


ಕಾಫಿ ವೆಚ್ಚದಲ್ಲೂ ತಮಗೇನಾದರೂ ಮಿಕ್ಕುತ್ತದಾ ಎಂದು ಕೆದಕಿ ನೋಡುವ ಭ್ರಷ್ಟ, ಲಂಚಕೋರ, ಅಧಿಕಾರಿಗಳ, ಜನಪ್ರತಿನಿಧಿಗಳ ನಡುವೆ ನವೀನ್ ಹಾವಳಿ ಯಂತಹ ಜನ ನಾಯಕರು ವಿಭಿನ್ನವಾಗಿ, ಸಮಸ್ತರಿಗೂ ಮಾದರಿಯಾಗಿ ನಿಲ್ಲುತ್ತಾರೆ. ಗ್ರಾಮ ಪಂಚಾಯಿತಿಯ ತಮ್ಮ ಉಪಾಧ್ಯಕ್ಷ ಸ್ಥಾನಕ್ಕೆ ಬಂದ ಸಂಭಾವನೆಯ ಹಣದಲ್ಲಿ ಗ್ರಾಮದ ಬಸ್ ನಿಲ್ದಾಣಕ್ಕೆ ಬಣ್ಣ ಹೊಡೆಸಿ ಸ್ವಚ್ಛಗೊಳಿಸಿದ್ದಾರೆ.


ನಮಗೆ ಬೇಕಿರುವುದು ಇಂಥಾ ಜನಪ್ರತಿನಿಧಿಗಳು ಎಂದು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು .

Sahifa Theme License is not validated, Go to the theme options page to validate the license, You need a single license for each domain name.