ಬಣಕಲ್ ಫ್ರೆಂಡ್ಸ್ ಕ್ಲಬ್ ಹಾಗೂ ರಿವರ್ ವ್ಯೂ ಶಾಲಾ ವತಿಯಿಂದ ಸರಳ ಧ್ವಜಾರೋಹಣ ಕಾರ್ಯಕ್ರಮ

Banakal gram panchayat
ಪ್ರಾಥಮಿಕ ಆರೋಗ್ಯ ಕೇಂದ್ರ ಬಣಕಲ್

ಬಣಕಲ್ ಫ್ರೆಂಡ್ಸ್ ಕ್ಲಬ್ ಹಾಗೂ ರಿವರ್ ವ್ಯೂ ಶಾಲಾ ವತಿಯಿಂದ ಸರಳ ಧ್ವಜಾರೋಹಣ ಕಾರ್ಯಕ್ರಮ ಜಿಲ್ಲಾದ್ಯಂತ ಎಲ್ಲಿ ನೋಡಿದರೂ ದೇಶದ 75ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ ಮುಗಿಲು ಮುಟ್ಟಿತ್ತು. ಜಿಲ್ಲಾ ಕೇಂದ್ರ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಭಾನುವಾರ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಶಾಲಾ, ಕಾಲೇಜುಗಳಲ್ಲಿ, ಸರ್ಕಾರಿ ಕಚೇರಿ ಕಟ್ಟಡಗಳ ಮೇಲೆ ತ್ರಿವರ್ಣಧ್ವಜ ಹಾರಿಸಿ ಭಾರತಾಂಬೆಗೆ ಗೌರವ ಸೂಚಿಸಲಾಯಿತು. ಎತ್ತ ಕಣ್ಣಾಯಿಸಿದರೂ ರಾಷ್ಟ್ರಧ್ವಜಗಳು ರಾರಾಜಿಸಿದವು. ಕೊರೋನ ನಡುವೆ ,ರಿವರ್ ವ್ಯೂ ಶಾಲಾ ಆವರಣದಲ್ಲಿ ಶಾಲಾ ಆಡಳಿತ ಮಂಡಳಿ ಹಾಗೂ ಬಣಕಲ್ ಫ್ರೆಂಡ್ಸ್ ಕ್ಲಬ್ ನ ಸದಸ್ಯರು ಪಾಲ್ಗೊಂಡು ಭಾರತ ಮಾತೆಯ ಪರ ಘೋಷಣೆ ಕೂಗಿ , ಸ್ವಾತಂತ್ರ್ಯ ಸೇನಾನಿಗಳ ಪರ ನುಡಿಮುತ್ತುಗಳು ಮಾರ್ದನಿಸಿದವು. ಅಲ್ಲಲ್ಲಿ ಸಂಘ, ಸಂಸ್ಥೆಗಳು ಬೃಹತ್‌ ಉದ್ದದ ತ್ರಿವರ್ಣ ಧ್ವಜ ಪ್ರದರ್ಶಿಸುವ ಮೂಲಕ ಸಾರ್ವಜನಿಕರಲ್ಲಿ ದೇಶಾಭಿಮಾನ ಮೂಡಿಸಿದರು, ಹಾಗೆಯೇ ಬಣಕಲ್ ನಾ ವಿವಿದೆಡೆ ಸರಳ ಸಂಭ್ರಮದ ಸ್ವಾತಂತ್ರ್ಯ ದಿನ ಆಚರಣೆಯ ಪ್ರತೀಕವಾಗಿ ಬಣಕಲ್ ಅಲ್ಲಿ ಶ್ರಮಜೀವಿ ಆಟೋ ಚಾಲಕರ ಮತ್ತು ಮಾಲೀಕರ ಸಂಘ, ಬಣಕಲ್ ಪೊಲೀಸ್ ಠಾಣೆ, ಬಣಕಲ್ ಗ್ರಾಮ ಪಂಚಾಯಿತಿ, ಪ್ರಾಥಮಿಕ ಆರೋಗ್ಯ ಕೇಂದ್ರ ಬಣಕಲ್ ಅಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು. ಈ ಸಂದರ್ಭದಲ್ಲಿ ಬಣಕಲ್ ಫ್ರೆಂಡ್ಸ್ ಕ್ಲಬ್ ಆಯೋಜಿಸಿದ್ದ ಮಕ್ಕಳ ಕೊರೋನ ಜಾಗೃತಿ ಮೂಡಿಸುವ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಣೆ ಮಾಡಲಾಯಿತು ನಮ್ಮೂರ ಬಣಕಲ್ ಗ್ರೂಪ್ ನಿಂದ ದೇಣಿಗೆ ಸಂಗ್ರಹಣೆಯಾದ ಹಣವನ್ನು ಇಂದು ಅಂಗಡಿ ಸುಟ್ಟು ನೆಲೆ ಕಳೆದುಕೊಂಡ ಮಾಲೀಕರಿಗೆ ಕೊಡಲಾಯಿತು