ಇಂದು ಬಣಕಲ್ ರಿವರ್ ವ್ಯೂ ಶಾಲೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಬಣಕಲ್ ಫ್ರೆಂಡ್ಸ್ ಕ್ಲಬ್ ನ ನೂತನ ಅಧ್ಯಕ್ಷರು ಹಾಗೂ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು ಸ್ವಾತಂತ್ರ್ಯ ದಿನಾಚರಣೆಯಂದು ಕ್ಲಬ್ ಆಯೋಜಿಸಿದ್ದ ಸಭೆಯಲ್ಲಿ ಫ್ರೆಂಡ್ಸ್ ಕ್ಲಬ್ ನ ನೂತನ ಅಧ್ಯಕ್ಷರಾಗಿ ಗೌರವ ಅಧ್ಯಕ್ಷ ಪ್ರವೀಣ್ ಗೌಡರ ಸಮ್ಮುಖದಲ್ಲಿ ಅರುಣ್ ಪೂಜಾರಿ ಅವರನ್ನು ಆಯ್ಕೆ ಮಾಡಲಾಯಿತು ಹಲವಾರು ವರ್ಷಗಳಿಂದ ಕಾರ್ಯದರ್ಶಿಯಾಗಿ ಕೆಲಸ ಮಾಡಿದ ಅನುಭವವಿರುವ ಅರುಣ್ ಪೂಜಾರಿ ಅವರು ಕ್ಲಬ್ ನ ಯಶಸ್ಸಿನಲ್ಲಿ ಅವರು ನೀಡಿದ ಕೊಡುಗೆ ಅಪಾರ ಕ್ಲಬ್ ನಿಂದ ಕೈಗೊಳ್ಳಲಾದ ಅನೇಕ ಸಾಮಾಜಿಕ ಕಳಕಳಿಯ ಕೆಲಸಗಳಲ್ಲಿ ಮುಂಚೂಣಿಯಲ್ಲಿ ನಿಂತು ತನ್ನನ್ನು ತಾನು ತೊಡಗಿಸಿಕೊಳ್ಳುತ್ತಾ ಬಂದಿದ್ದಾರೆ ಹಾಗೂ ಕ್ಲಬ್ ನ ಎಲ್ಲಾ ಸದಸ್ಯರನ್ನು ಒಂದು ಗೂಡಿಸಿ ಎಲ್ಲರೊಂದಿಗೂ ಆತ್ಮೀಯವಾಗಿ ಬೆರೆಯುತ್ತಾ ಕ್ಲಬ್ ಅನ್ನು ಯಶಸ್ಸಿನೆಡೆ ಮುನ್ನಡೆಸಲು ಕಾರಣಿಕರ್ತರಾದ ಶುದ್ಧ ವ್ಯಕ್ತಿತ್ವದ ಅರುಣ್ ಪೂಜಾರಿ ಅವರನ್ನು ಸರ್ವ ಸದಸ್ಯರ ಸಮ್ಮುಖದಲ್ಲಿ ಸರ್ವಾನು ಮತದಿಂದ ಆಯ್ಕೆ ಮಾಡಲಾಯಿತು ಹಾಗೆ ನೂತನ ಪದಾಧಿಕಾರಿಗಳ ಆಯ್ಕೆ ಕೂಡ ಮಾಡಲಾಯಿತು ಕಾರ್ಯಕ್ರಮದಲ್ಲಿ ಸದಸ್ಯರಾದ ನಿಶಾಂತ್ ಉತ್ತಮ್ ಅರುಣ್ ಪರ್ಬು ಮಧು ಹಸೈನರ್ ಸೂರಿ ನವೀನ ಅಣ್ಣು ಹರೀಶ್ ಅಶೋಕ್ mkt ಅಶೋಕ ವಿಕ್ಕಿ ರಶೀದ್ ಸಿದ್ದಿಕ್ ಸತೀಶ್ ಹಾರುನ್ ಅಹಮದ್ ಭಾವ ರಿವರ್ ವ್ಯೂ ಶಾಲೆಯ ಮುಖ್ಯ ಶಿಕ್ಷಕರು ಶಾಲಾ ಶಿಕ್ಷಕಿಯರು ಭಾಗಿಯಾಗಿದ್ದರು
ನೂತನ ಪದಾಧಿಕಾರಿಗಳಾಗಿ
(1)ಉಪಾಧ್ಯಕ್ಷರಾಗಿ
ಸಿದ್ದಿಕ್
(2)ಕಾರ್ಯದರ್ಶಿಗಳಾಗಿ
ನಿಶಾಂತ್
(3)ಖಜಾಂಚಿಯಾಗಿ
ಸೂರಿ
ಅವರನ್ನು ನೇಮಕ ಮಾಡಲಾಯಿತು