ಚಿತ್ರದುರ್ಗದಲ್ಲಿ ನಡೆದ ಐ.ಸಿ.ಎಸ್.ಇ ವಲಯ ಮಟ್ಟದ ಕ್ರೀಡಾಕೂಟ:ಬಣಕಲ್ ನಜರತ್ ಶಾಲಾ ವಿದ್ಯಾರ್ಥಿಗಳ ಸಾಧನೆ


ಚಿತ್ರದುರ್ಗದ ಒನಕೆ ಓಬವ್ವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ 7 ಜಿಲ್ಲೆಗಳನ್ನೊಳಗೊಂಡ ಐ.ಸಿ.ಎಸ್.ಇ ಶಾಲೆಗಳ ವಲಯ ಮಟ್ಟದ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಬಣಕಲ್ ನಜರತ್ ಶಾಲೆಯ ವಿದ್ಯಾರ್ಥಿಗಳಾದ ಪ್ರೀಡನ್ ಡಿಸೋಜಾ ಹಾಗೂ ಕ್ರಿಸ್ಟನ್ ಸ್ಟೀವ್ ಲಸ್ರದೋ 19ರ ವಯೋಮಾನದ ಡಬಲ್ಸ್ ವಿಭಾಗದಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ ಹಾಗೂ 17ರ ವಯೋಮಾನದ ಡಬಲ್ಸ್ ನಲ್ಲಿ ಮೊಹಮ್ಮದ್ ಆದಿಲ್ ಮತ್ತು ಮೊಹಮ್ಮದ್ ಅಂಫಾಲ್ ತೃತೀಯ ಸ್ಥಾನ ಪಡೆದಿದ್ದಾರೆ.

19ರ ವಯೋಮಾನದ ಬ್ಯಾಡ್ಮಿಂಟನ್ ಸಿಂಗಲ್ಸ್ ನಲ್ಲಿ ಅವಿನ್ ಡಿಸೋಜಾ ತೃತೀಯ ಸ್ಥಾನವನ್ನು ಪಡೆದು ಶಾಲೆಗೆ ಕೀರ್ತಿ ತಂದಿರುತ್ತಾರೆ ಇವರ ಈ ಸಾಧನೆಗೆ ಶಾಲಾ ಆಡಳಿತ ಮಂಡಳಿ ಪ್ರಾಂಶುಪಾಲರು ಹಾಗೂ ಸಿಬ್ಬಂದಿಯವರು ಹರ್ಷ ವ್ಯಕ್ತಪಡಿಸಿದ್ದಾರೆ.