ಬಣಕಲ್ ಮೂಡಿಗೆರೆ ತಾಲ್ಲೂಕ್ಕಿನ ಬಿ, ಹೊಸಹಳ್ಳಿ ಗ್ರಾಮದಲ್ಲಿ ಹಿಂದೂ-ಮುಸ್ಲಿಮರು ಒಟ್ಟಾಗಿ ಸೇರಿ ಮೊಹರಂ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿದರು. ಈ ಮೂಲಕ ಹಿಂದೂ-ಮುಸ್ಲಿಂ ಭಾವೈಕ್ಯತೆಯನ್ನು ಮೆರೆದರು.
ಬಿ. ಹೊಸಹಳ್ಳಿ ಗ್ರಾಮದಲ್ಲಿ ಒಂದೇ ಒಂದು ಮುಸ್ಲಿಂ ಸಮುದಾಯದ ಕುಟುಂಬ ಇಲ್ಲ. ಮುಸ್ಲಿಂಮರ ಹಬ್ಬವನ್ನು ನಾವ್ಯಾಕೆ ಮಾಡಬೇಕು ಎನ್ನುವ ಮತಭೇದ ಇಲ್ಲದೆ, ಹಿಂದೂಗಳು ಮುಸ್ಲಿಮರು ಒಗ್ಗೂಡಿ ಪ್ರಾರ್ಥನೆ ಸಲ್ಲಿಸಿ ಮೊಹರಂ ಹಬ್ಬವನ್ನು ಆಚರಿಸುತ್ತಿದ್ದಾರೆ.
ಗ್ರಾಮದಲ್ಲಿ ಹಿಂದೂ ಬಾಂಧವರು ಮೊಹರಂ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿರುವುದು ಕೇವಲ ಒಂದು ಹಬ್ಬದ ಆಚರಣೆಯಷ್ಟೇ ಅಲ್ಲ; ಅದು ಭಾರತೀಯ ಸಂಸ್ಕೃತಿಯ ಮೂಲ ಸ್ವರೂಪವಾದ ಏಕತೆಯ ಸಂದೇಶವನ್ನು ಪ್ರತಿಬಿಂಬಿಸುತ್ತದೆ. ಧರ್ಮ, ಜಾತಿ ಅಥವಾ ಸಮುದಾಯದ ಗೋಡೆಗಳನ್ನು ಮೀರಿ ಪರಸ್ಪರರ ದುಃಖ-ಸಂತೋಷಗಳಲ್ಲಿ ಭಾಗಿಯಾಗುವ ಈ ಪರಂಪರೆ ಸಾಮರಸ್ಯದ ಜೀವಂತ ಉದಾಹರಣೆಯಾಗಿದೆ
ವರದಿ :✍️ಸೂರಿ ಬಣಕಲ್
Banakal News ನಮ್ಮ ನಡೆ ರೋಚಕ ಸುದ್ದಿಯ ಕಡೆ