ಬಣಕಲ್ :ಫುಟ್ ಪಾತ್‌ಗಳಲ್ಲಿ ಅಕ್ರಮವಾಗಿ ಸಾಮಗ್ರಿ ಇಡುವುದನ್ನು ತಡೆಯಲು ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (PSI) ದಿಲೀಪ್ ರವರು ಭಾನುವಾರ ಸಂಜೆ ಪೊಲೀಸ್ ಸಿಬ್ಬಂದಿಗಳೊಂದಿಗೆ ಬಣಕಲ್ ನಲ್ಲಿರುವ ಪ್ರತಿ ಅಂಗಡಿಗಳಿಗೆ ಭೇಟಿ ನೀಡಿದರು.
ಸಾರ್ವಜನಿಕರ ಹಿತದೃಷ್ಟಿಯಿಂದ ಪಾದಚಾರಿಗಳ ಓಡಾಟಕ್ಕೆ ಅನುಕೂಲ ಮಾಡಿಕೊಡಲು, ವ್ಯಾಪಾರಿಗಳು ಅಥವಾ ಅಂಗಡಿ ಮಾಲೀಕರು ಫುಟ್ ಪಾತ್ ಮೇಲೆ ತಮ್ಮ ಸಾಮಗ್ರಿಗಳನ್ನು ಇಟ್ಟುಕೊಳ್ಳಬಾರದು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬಣಕಲ್ ನ್ಯೂಸ್ ನೊಂದಿಗೆ ಮಾತನಾಡಿದ ಅವರು ಫುಟ್ ಪಾತ್ ಮೇಲೆ ವ್ಯಾಪಾರಿಗಳು ಅಥವಾ ಅಂಗಡಿ ವಸ್ತುಗಳನ್ನು ಇಡುವುದರಿಂದ ಪಾದಚಾರಿಗಳಿಗೆ ತೊಂದರೆಯಾಗುತ್ತಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತಿದೆ.
ವ್ಯಾಪಾರಿಗಳು ಫುಟ್ ಪಾತ್‌ಗಳನ್ನು ಅತಿಕ್ರಮಿಸದಂತೆ, ಸಾಮಗ್ರಿಗಳನ್ನು ಅಂಗಡಿಯ ಒಳಗೆ ಇಟ್ಟುಕೊಳ್ಳಬೇಕು ಎಂದರು. ಬಣಕಲ್ ನಲ್ಲಿ ವಾಹನಗಳು ಬೇಕಾಬಿಟ್ಟಿ ನಿಲ್ಲಿಸುವುದು ಟ್ರಾಫಿಕ್ ಸಮಸ್ಯೆಗೆ ಕೂಡ ಕಾರಣವಾಗುತ್ತಿದೆ ಸದ್ಯದಲ್ಲೇ ಸಮಸ್ಯೆಗೆ ಪರಿಹಾರ ಕಲ್ಪಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.
ವರದಿ ✍️ಸೂರಿ ಬಣಕಲ್
Banakal News ನಮ್ಮ ನಡೆ ರೋಚಕ ಸುದ್ದಿಯ ಕಡೆ