ಹಳೆ ವಿದ್ಯಾರ್ಥಿಗಳ ಸಮಾಗಮ :2006-07ನೇ ಸಾಲಿನ ಹಳೆ ವಿದ್ಯಾರ್ಥಿಗಳಿಂದ ಬಣಕಲ್ ಪ್ರೌಢಶಾಲೆಗೆ ನಾಮಫಲಕ ಕೊಡುಗೆ

ಬಣಕಲ್: ಮೂಡಿಗೆರೆ ಬಣಕಲ್ ಗ್ರಾಮದ ಬಣಕಲ್ ಪ್ರೌಢಶಾಲೆಯ 2006-07ನೇ ಸಾಲಿನ ಹಳೆ ವಿದ್ಯಾರ್ಥಿಗಳಿಂದ ನೂತನ ಕೊಡುಗೆಯಾಗಿ ಶಾಲೆಗೆ ನಾಮಫಲಕ ನೀಡಿದರು.

ಈ ವೇಳೆ ಹಳೆ ವಿದ್ಯಾರ್ಥಿ ಅಶೋಕ್ ಮಾತನಾಡಿ, ನಮ್ಮದು ಬಹಳ ದಿನದ ಕನಸು ನಾವು ಕಲಿತ ಶಾಲೆಗೆ ಏನಾದರೂ ನೀಡಬೇಕೆಂದು, ನಮ್ಮ ಸ್ನೇಹ, ಪ್ರೀತಿಯ ಸೂಚಕವಾಗಿ ನಾಮಫಲಕ ನೀಡಿದ್ದೇವೆ. ನಾಮಫಲಕಕ್ಕೆ ಅವಕಾಶ ಮಾಡಿಕೊಟ್ಟ ಶಾಲೆ ಗುರುಗಳಿಗೆ ಧನ್ಯವಾದ ತಿಳಿಸುತ್ತೇವೆ ಎಂದರು.

ಮುಖ್ಯ ಶಿಕ್ಷಕ ಶ್ರೀನಿವಾಸ್ ಮಾತನಾಡಿ, ಪ್ರೌಢ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ನಾಮಫಲಕ ನೀಡಿದ್ದು ಹೆಮ್ಮೆಯ ಸಂಗತಿ, ಕಲಿತಿರುವ ವಿದ್ಯಾರ್ಥಿಗಳು ಈಗ ಉನ್ನತ ಹುದ್ದೆಯಲ್ಲಿದ್ದಾರೆ. ಈಗಿನ ವಿದ್ಯಾರ್ಥಿಗಳು ಕೂಡಾ ಶಾಲೆಯಲ್ಲಿ ಪ್ರಮುಖ ವಿದ್ಯೆ ಸಂಸ್ಕಾರ ಜೀವನ ಮಾರ್ಗಕ್ಕೆ ಬೇಕಾಗುವ ಎಲ್ಲವನ್ನು ಕಲಿಯಬೇಕು ಹಾಗೂ ಉನ್ನತ ಸ್ಥಾನದಲ್ಲಿ ಇರಲು ಪ್ರಯತ್ನಿಸಬೇಕು ಎಂದರು.


ವರದಿ :✍️ಸೂರಿ ಬಣಕಲ್