ಮೂಡಿಗೆರೆ ತಾಲ್ಲೂಕು ಬಣಕಲ್ ನ ಶ್ರೀ ವಿದ್ಯಾಭಾರತಿ ಪ್ರೌಢಶಾಲೆಯ ಕನ್ನಡ ಮತ್ತು ಆಂಗ್ಲ ಮಾಧ್ಯಮದಲ್ಲಿ ಸತತ 14 ನೇ ಬಾರಿ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇಕಡಾ 100%ಫಲಿತಾಂಶ
2025-26ನೇ ಸಾಲಿನ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಗೆ ಶಾಲೆಯ ಕನ್ನಡ ಮತ್ತು ಆಂಗ್ಲ ಮಾಧ್ಯಮದಲ್ಲಿನ ಒಟ್ಟು 36 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಹಾಜರಾದ ಅಷ್ಟೂ ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶಾಲೆಯು ಸತತವಾಗಿ 14ನೇ ಬಾರಿ
ಕನ್ನಡ ಮಾಧ್ಯಮ 100%,ಆಂಗ್ಲ ಮಾಧ್ಯಮ 100%
ಶೇಕಡಾ ಫಲಿತಾಂಶ ಬಂದಿದೆ. ಇದರಲ್ಲಿಅತ್ಯುನ್ನತ ಶ್ರೇಣಿಯಲ್ಲಿ (Distinction)08, ಪ್ರಥಮ ಶ್ರೇಣಿಯಲ್ಲಿ (Firstclass)26, ದ್ವಿತೀಯ ಶ್ರೇಣಿಯಲ್ಲಿ (Second class)02ಉತ್ತೀರ್ಣರಾಗಿದ್ದಾರೆ. ಶ್ರೀಶಾ .ಬಿ.ಎಂ 596 / 625.(ಹಿಂದಿ ವಿಷಯದಲ್ಲಿ 100 / 100) ಅಂಕ ಪಡೆದು ಶಾಲೆಗೆ ಮೊದಲ ಸ್ಥಾನ ಪಡೆದುಕೊಂಡಿದ್ದಾಳೆ. ಸಾನುಷ್ 557 / 625.ತ್ರಿಶಾ 553 / 625. ಅನ್ವಿತಾ.ಹೆಚ್.ಎ 549 / 625. ಅನೂಪ್.ಡಿ.ಪಿ…….544 / 625.ಅಂಕಗಳಿಂದ ಉತ್ತೀರ್ಣರಾಗಿದ್ದಾರೆ. ಮತ್ತು ಧನುಷ್.ಬಿ.ಜೆ…ಸಮಾಜ ವಿಜ್ಞಾನ ವಿಷಯದಲ್ಲಿ 100 / 100 ಅಂಕ ಗಳಿಸಿ ಉತ್ತೀರ್ಣನಾಗಿದ್ದಾನೆ. ಎಂದು ಶಾಲಾ ಆಡಳಿತ ಮಂಡಳಿ ತಿಳಿಸಿದೆ.
ಸತತವಾಗಿ 14ನೇ ವರ್ಷವೂ ಶೇಕಡಾ 100% ಫಲಿತಾಂಶ ತಂದುಕೊಟ್ಟ ವಿದ್ಯಾರ್ಥಿಗಳು ಹಾಗೂ ಇದಕ್ಕೆ ಶ್ರಮಿಸಿದ ಶಿಕ್ಷಕರಿಗೆ ಶಾಲಾ ಆಡಳಿತ ಮಂಡಳಿಯು ಅಭಿನಂದನೆ ಸಲ್ಲಿಸಿದ್ದಾರೆ.
Banakal News ನಮ್ಮ ನಡೆ ರೋಚಕ ಸುದ್ದಿಯ ಕಡೆ