ಸ್ವಂತ ಕಾರಿಗೆ ಪೊಲೀಸ್ ಸ್ಟಿಕರ್: ಬಣಕಲ್ ಪಿ.ಎಸ್.ಐ ರೇಣುಕಾರವರಿಂದ ಕಾನೂನು ಕ್ರಮ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ



‎ಖಾಸಗಿ ಕಾರಿನಲ್ಲಿ ಪೊಲೀಸ್ ನಾಮಫಲಕ ಬಳಸಿಕೊಂಡು ಕುಟುಂಬದೊಂದಿಗೆ ಪ್ರವಾಸಕ್ಕೆ ತೆರಳಿದ್ದ ಅಧಿಕಾರಿಗಳ ವಿರುದ್ದ ಬಣಕಲ್ ಠಾಣಾ ಪಿ.ಎಸ್‌.ಐ. ರೇಣುಕಾರವರು ಕಾನೂನು ಕ್ರಮ ಕೈಗೊಂಡಿರುವುದು ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.

‎ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರ ಚೆಕ್‌ ಪೋಸ್ಟ್‌ನಲ್ಲಿ ಎಂದಿನಂತೆ ಬಣಕಲ್ ಠಾಣಾ ಪಿ ಎಸ್ ಐ ರೇಣುಕಾರವರು ಕರ್ತವ್ಯ ನಿರ್ವಹಿಸುತ್ತಿದ್ದರು. ಈ ಸಂದರ್ಭದಲ್ಲಿ ಧಾರವಾಡದಿಂದ ಧರ್ಮಸ್ಥಳಕ್ಕೆ ಕುಟುಂಬ ಸಮೇತ ತೆರಳುತ್ತಿದ್ದ ಕಾರನ್ನು ತಡೆದು ಪರಿಶೀಲನೆ ನಡೆಸಿದ್ದಾರೆ.ಈ ವೇಳೆ ಕರ್ತವ್ಯದಲ್ಲಿ ಇಲ್ಲದಿದ್ದರೂ ಕಾರಿನಲ್ಲಿ ಪೊಲೀಸ್ ಎಂಬ ನಾಮಫಲಕ ಅಳವಡಿಸಿಕೊಂಡಿರುವುದು ಪತ್ತೆಯಾಗಿದೆ. ಅಧಿಕೃತ ಅನುಮತಿ ಇಲ್ಲದೆ ಖಾಸಗಿ ವಾಹನದಲ್ಲಿ ಪೊಲೀಸ್ ನಾಮಫಲಕ ಬಳಕೆ ಕಾನೂನುಬಾಹಿರವಾಗಿರುವ ಹಿನ್ನೆಲೆಯಲ್ಲಿ, ಪಿಎಸ್‌ಐ ರೇಣುಕಾರವರು ಯಾವುದನ್ನೂ ಲೆಕ್ಕಿಸದೇ ನಿರ್ಧಾಕ್ಷಿಣವಾಗಿ ಸ್ಥಳದಲ್ಲೇ ನಾಮಫಲಕವನ್ನು ತೆರವುಗೊಳಿಸಿ, ಸಂಚಾರಿ ನಿಯಮ ಉಲ್ಲಂಘನೆ ಸಂಬಂಧ ದಂಡ ವಿಧಿಸಿ ಪ್ರಕರಣ ದಾಖಲಿಸಿದ್ದಾರೆ.
‎ಕಾನೂನು ಎಲ್ಲರಿಗೂ ಒಂದೇ ಎಂಬ ಸಂದೇಶವನ್ನು ಪೊಲೀಸ್ ಇಲಾಖೆ ಸಮಾಜಕ್ಕೆ ಬಲವಾಗಿ ರವಾನಿಸಿದೆ.

‎ಪಿ ಎಸ್ ಐ ರೇಣುಕಾ ರವರ ಪ್ರಾಮಾಣಿಕ ಕರ್ತವ್ಯನಿಷ್ಠೆ ಹಾಗೂ ಯಾವುದನ್ನೂ ಲೆಕ್ಕಿಸದೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಂಡಿರುವುದು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ವರದಿ :✍️ಸೂರಿ ಬಣಕಲ್