ಬಣಕಲ್ ನ ಜನರ ಜೀವನಾಡಿ ಆಗಿರುವ ಹೇಮಾವತಿ ನದಿಗೆ ಯಾರೋ ದುಷ್ಕರ್ಮಿಗಳು ಡೈಪರ್ ಗಳು ಹಾಗೂ ನಾಯಿಯ ಕಳೆಬರವನ್ನು ಬಿಸಾಡಿ ನೀರನ್ನು ಕಲುಷಿತ ಗೊಳಿಸಿದ್ದಾರೆ. ಕೊಳೆತು ನಾರುತ್ತಿದ್ದ ನಾಯಿಯ ಕಳೆಬರ ದುರ್ವಾಸನೆ ಬಿರುವುದನ್ನು ಗಮನಿಸಿದ ಬಣಕಲ್ ನ ನಿವಾಸಿ ಸಮಾಜ ಸೇವಕರಾದ ಆರಿಫ್, ಗಣೇಶ್ ಹಾಗೂ ಮತ್ತಿಕಟ್ಟೆ ಹರೀಶ್ ರವರು ಸ್ಥಳಕ್ಕೆ ದಾವಿಸಿ ಕೊಳೆತು ನಾರುತ್ತಿದ್ದ ನಾಯಿಯ ಕಳೆಬರವನ್ನು ಹೊರತೆಗೆದಿದ್ದಾರೆ.
ರೈತರ ಪಾಲಿನ ನೆಚ್ಚಿನ ನದಿ. ನೂರಾರು ಎಕರೆಗೆ ನೀರು ಉಣಿಸಿ ನೇಗಿಲ ಯೋಗಿಗೆ ಜೀವನ ನೀಡ್ತಿರೂ ಜೀವದಾತೆ ಹೇಮಾವತಿ. ಊರು ತುಂಬಾ ಹಸಿರು ತುಂಬಿ ಪ್ರಕೃತಿ ಮಾತೆಗೆ ಉಸಿರು ನೀಡ್ತಿರೋ ಜೀವನದಿ. ಆದ್ರೇ ಪ್ರಕೃತಿ ನೀಡ್ತಿರೋ ಉಪಕಾರದ ಸ್ಮರಣೆ ಮನುಷ್ಯನಿಗೆ ಎಲ್ಲಿದೆ ಹೇಳಿ. ಮನಷ್ಯನ ಸ್ವಾರ್ಥಕ್ಕೆ ಬಲಿಯಾಗ್ತಿರೋ ಈ ಜೀವದಾತೆಯ ಪರಿಸ್ಥಿತಿಯ ಜೊತೆಗೆ ಜಲಚರಗಳ ಜೀವಕ್ಕೆ ಕುತ್ತು ಬಂದಿದೆ.
ನೀರು ಶುದ್ಧವಾಗಿರಬೇಕು ಎಂದು ಹೇಳುತ್ತಾರೆ. ಆದರೆ ಜನರು ಹಲವು ತರದ ತ್ಯಾಜ್ಯ ತಂದು ಹೇಮಾವತಿ ನದಿಗೆ ಎಸೆಯುವುದರಿಂದ ಹೇಮಾವತಿ ನದಿಯಲ್ಲಿ ಹಲವು ಕಡೆ ವಿಪರೀತ ತ್ಯಾಜ್ಯ ಕಂಡು ಬರುತ್ತಿದೆ. ನೀರು ಸ್ವಲ್ಪ ತಗ್ಗಿದ ಕಾರಣ ಕಸ ಕಡ್ಡಿ ಪ್ಯಾಂಪಾರ್ಸ್ ಹಾಗೂ ಇನ್ನಿತರ ತ್ಯಾಜ್ಯಗಳು ಕಂಡು ಬರುತ್ತಿದೆ. ಇದೆ ನೀರನ್ನು ಅವಲಂಬಿಸಿರುವ ಈ ಭಾಗದ ಗ್ರಾಮಸ್ಥರು ಇದರಿಂದ ಆತಂಕಕ್ಕೆ ಒಳಗಾಗಿದ್ದಾರೆ..
ಈ ರೀತಿ ನೀರಿಗೆ ತ್ಯಾಜ್ಯವನ್ನು ಹಾಕಿ ಕಲುಷಿತಗೊಳಿಸುವವರು ಯಾರಿಗಾದರೂ ಕಂಡು ಬಂದಲ್ಲಿ ಠಾಣೆಗೆ ಹಾಗೂ ಗ್ರಾಮ ಪಂಚಾಯಿತಿಗೆ ದೂರು ನೀಡಿ ಎಂಬುದು ಗ್ರಾಮಸ್ಥರ ವಿನಂತಿ.
ಮುಂದೆ ಈರೀತಿ ಘಟನೆ ಮಾರುಕಳಿಸದಂತೆ ಎಚ್ಚರ ವಹಿಸಿ ಅಂತವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು.ಎಂಬುದು ಗ್ರಾಮಸ್ಥರ ಅಗ್ರಹ.
ವರದಿ :✍️ಸೂರಿ ಬಣಕಲ್
Banakal News ನಮ್ಮ ನಡೆ ರೋಚಕ ಸುದ್ದಿಯ ಕಡೆ