ಬಣಕಲ್ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿ.ಎನ್. ಕೃಷ್ಣಪ್ಪ ವರ್ಗಾವಣೆ

ಬಣಕಲ್ ನಲ್ಲಿ ಗ್ರಾಮ ಪಂಚಾಯಿತಿಯಲ್ಲಿ ಕಳೆದ ಆರು ವರ್ಷಗಳಿಂದ ಅಭಿವೃದ್ಧಿ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಬಿ.ಎನ್. ಕೃಷ್ಣಪ್ಪರವರು ಸರ್ಕಾರದ ನಿರ್ದೇಶನದಂತೆ ಕಿರುಗುಂದ ಗ್ರಾಮ ಪಂಚಾಯಿತಿಗೆ ವರ್ಗಾವಣೆಯಾಗಿದ್ದಾರೆ.

ಬಣಕಲ್ ಗ್ರಾಮ ಪಂಚಾಯಿತಿಯಲ್ಲಿ ಕೃಷ್ಣಪ್ಪ ರವರು ಅಭಿವೃದ್ಧಿ ಅಧಿಕಾರಿಯಾಗಿ ಉತ್ತಮ ಸೇವೆ ಸಲ್ಲಿಸಿದ್ದಾರೆ. ಅವರ ಅವಧಿಯಲ್ಲಿ ನಡೆದ ಹಲವಾರು ಜನಪರ ಕಾರ್ಯಕ್ರಮಗಳು ಜನ ಮನದಲ್ಲಿದೆ.

ಸರಳ ಸಜ್ಜನ ವ್ಯಕ್ತಿತ್ವ ಹೊಂದಿದ್ದ ಕೃಷ್ಣಪ್ಪರವರ ಶಿಸ್ತು ಮತ್ತು ಸಮಯ ನಿರ್ವಹಣೆ ಇತರರಿಗೆ ಮಾದರಿಯಾಗಿದೆ. ಬಣಕಲ್ ಗ್ರಾಮ ಪಂಚಾಯಿತಿಯಲ್ಲಿ 6ವರ್ಷಗಳ ಕಾಲ ಸೇವೆ ಸಲ್ಲಿಸಿ ಉತ್ತಮ ಅಧಿಕಾರಿಯಾಗಿ ಎಲ್ಲರ ಪ್ರೀತಿಗೆ ಪಾತ್ರರಾಗಿ ವರ್ಗಾವಣೆ ಯಾಗಿದ್ದಾರೆ.

ಕಳೆದ 6ವರ್ಷಗಳಲ್ಲಿ ಬಣಕಲ್ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯವರು ಹಾಗೂ ಗ್ರಾಮಸ್ಥರ ಸಹಕಾರದಿಂದ ಮತ್ತಿಕಟ್ಟೆ ರಸ್ತೆ ಬದಿ ಇಂಟರ್ಲಾಕ್ ಅಳವಡಿಕೆ. ಕಸವಿಲೇವಾರಿ ಘಟಕ ಗ್ರಂಥಾಲಯ ಕಟ್ಟಡ. ಸಂಜೀವಿನಿ ಶೆಡ್ ಅಮೃತ ಸರೋವರ. ಶಾಲೆಗಳ ದಾಸೋಹಭವನ. ಕಪೌಂಡ್. ಆಸ್ಪತ್ರೆ ರಸ್ತೆ. ಪ್ರಯಾಣಿಕರ ತಂಗುದಾಣ. ಗ್ರಾಮಪಂಚಾಯಿತಿ ಸಮೀಪ ಊಟದ ಕೊಠಡಿ. ಹಲವಾರು ಅಭಿವೃದ್ದಿ ಕಾಮಗಾರಿಗಳನ್ನು ಮಾಡಲಾಗಿದೆ. ಅವರ ಅವಧಿಯಲ್ಲಿ ಆದ ಕೆಲಸಗಳು ಜನ ಮೆಚ್ಚುಗೆಗೆ ಪಾತ್ರವಾಗಿದೆ. ಹೀಗೆ ಮುಂದೆಯೂ ಅವರ ಮುಂದಿನ ಸೇವಾ ಅವಧಿಯಲ್ಲಿ ಉತ್ತಮ ಕಾರ್ಯಕ್ರಮಗಳು ಜನರಿಗೆ ಸಿಗುವಂತಾಗಲಿ ಎಂದು ಬಣಕಲ್ ಗ್ರಾಮಸ್ಥರ ಹಾರೈಕೆ

ವರದಿ ✍️ಸೂರಿ ಬಣಕಲ್