ಗುಡ್ಡಹಟ್ಟಿ ಶಾಲಾ ಆವರಣದಲ್ಲಿ ವಾಮಾಚಾರ :ಶಿಕ್ಷಕರು ಗ್ರಾಮಸ್ಥರಲ್ಲಿ ಆತಂಕ

ಬಣಕಲ್ :ಗುಡ್ಡಹಟ್ಟಿ ಅಂಗನವಾಡಿ ಬಳಿಕಿಡಿಗೇಡಿಗಳು ವಾಮಾಚಾರಮಾಡಿದ್ದು ಶಾಲಾ ಶಿಕ್ಷಕರು ಪಾಲಕರು ಆತಂಕಕ್ಕೆ ಒಳಗಾಗಿದ್ದಾರೆ.

ಸೋಮವಾರ ಬೆಳಗ್ಗೆ ಶಾಲೆಗೆ ಆಗಮಿಸಿದ ಶಿಕ್ಷಕರಿಗೆ ದಾರ ಸುತ್ತಿದ ನಿಂಬೆಹಣ್ಣು ಎಲೆ ಹಾಗೂ ಇತರ ವಸ್ತುಗಳನ್ನು ಇಟ್ಟು ರಂಗೋಲಿ ಯಲ್ಲಿ ಮಂಡಲ ಹಾಕಿ ವಾಮಾಚಾರ ಮಾಡಿರುವುದು ಕಂಡಿದೆ.
ಕಿಡಿಗೇಡಿಗಳು ಮಾಡಿರುವ ಈ ವಾಮಾಚಾರದಿಂದ ಅಂಗನವಾಡಿ ಸಿಬ್ಬಂದಿ ಹಾಗೂ ಗ್ರಾಮಸ್ಥರಲ್ಲಿ ಆತಂಕ ಶುರುವಾಗಿದೆ.

ವರದಿ ✍️ಸೂರಿ ಬಣಕಲ್