ಕೆನರಾ ಬ್ಯಾಂಕ್ ಬಣಕಲ್ ಶಾಖೆಯು ಕಾರು ಅಪಘಾತದಲ್ಲಿ ಕೆಲವು ತಿಂಗಳ ಹಿಂದೆ ಮೃತಪಟ್ಟಿದ್ದ ಅಹ್ಮದ್ ಬಾವಾ ಅವರ ಪುತ್ರರಾದ ಸಯ್ಯದ್ ಅಲಿ ಅವರು ಪ್ರಧಾನ ಮಂತ್ರಿ ಸುರಕ್ಷಾ ವಿಮೆ ಯಲ್ಲಿ 20ರೂ ಕಟ್ಟಿ ಸದಸ್ಯರಾಗಿದ್ದರು. ದುರಾದೃಷ್ಟವಶಾತ್ ಅವರು ಅಪಘಾತದಿಂದ ನಿಧನರಾಗಿದ್ದರು. 15ದಿನದ ಹಿಂದೆ ಕುಟುಂಬ ಬಣಕಲ್ ಕೆನರಾ ಬ್ಯಾಂಕ್ ಗೆ ಭೇಟಿ ನೀಡಿ ವಿಮೆಯ ಬಗ್ಗೆ ಚರ್ಚಿಸಿದ್ದಾರೆ. ಬಣಕಲ್ ಕೆನರಾ ಬ್ಯಾಂಕ್ ವ್ಯವಸ್ಥಾಪಕರಾದ ಭರತ್ ಕುಮಾರ್ ಅವರು ಮುತುವರ್ಜಿ ವಹಿಸಿ ವಿಮಾ ದಾವೆಯನ್ನು ಕೇವಲ 15 ದಿನಗಳ ಒಳಗೆ ತೆರವುಗೊಳಿಸಿದೆ. ಶಾಖಾ ವ್ಯವಸ್ಥಾಪಕ ಭರತ್ ಕುಮಾರ್ ಈ ಸಂಬಂಧ ಮಾತನಾಡಿದ ಅವರು ಕೇವಲ 20 ರೂ. ಪ್ರೀಮಿಯಂನೊಂದಿಗೆ ಚಂದಾದಾರರಾಗಿದ್ದ ಅವರು ವಿಮೆಯಿಂದ 2,00,000 ರೂ. ಮೊತ್ತವನ್ನು ಪರಿಹಾರವಾಗಿ ಸ್ವೀಕರಿಸಿರುತ್ತಾರೆ. ಕುಟುಂಬದ ಮುಖ್ಯಸ್ಥರ ಅಭಾವದಲ್ಲಿ ಈ ಮೊತ್ತವು ಕುಟುಂಬಕ್ಕೆ ಸಹಾಯಕವಾಗಲಿದೆ.ಈ ಯೋಜನೆಯು ನಿಜಕ್ಕೂ ಅವರ ಕುಟುಂಬಕ್ಕೆ ಉಪಯೋಗವಾಗಲಿದೆ ಎಂದರು.
ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ: ಕೇವಲ 20 ರೂ. ಪ್ರೀಮಿಯಂನಲ್ಲಿ 2 ಲಕ್ಷ ರೂ.ಗಳ ಅಪಘಾತ ವಿಮಾ ಸೌಲಭ್ಯ! ಪಡೆಯುವುದು ಹೇಗೆ?
ಕೇಂದ್ರ ಸರ್ಕಾರದ ಜನ ಸುರಕ್ಷಾ ಯೋಜನೆಗಳಲ್ಲಿ ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಯು ಒಂದಾಗಿದೆ. ಮೇ 9, 2015 ರಂದು ಪ್ರಧಾನಿ ನರೇಂದ್ರ ಮೋದಿ ಅವರಿಂದ ಈ ಯೋಜನೆಗೆ ಚಾಲನೆ ನೀಡಲಾಯಿತು. 18 ರಿಂದ 70 ವರ್ಷ ವಯಸ್ಸಿನ ಬಡವರು ಮತ್ತು ಹಿಂದುಳಿದವರಿಗೆ ವಾರ್ಷಿಕ 20 ರೂ. ಪ್ರೀಮಿಯಂನಲ್ಲಿ ಕೈಗೆಟುಕುವ ವಿಮಾ ಯೋಜನೆಯನ್ನು ಒದಗಿಸುವ ಉದ್ದೇಶವನ್ನು ಇದು ಹೊಂದಿದೆ. ಅಪಘಾತ ಸಾವು ಮತ್ತು ಪೂರ್ಣ ಅಂಗವೈಕಲ್ಯಕ್ಕೆ ರೂ.2 ಲಕ್ಷ ಮತ್ತು ಭಾಗಶಃ ಅಂಗವೈಕಲ್ಯಕ್ಕೆ ರೂ.1 ಲಕ್ಷದ ಅಪಾಯದ ವ್ಯಾಪ್ತಿಯನ್ನು ಹೊಂದಿದೆ. ಈ ಪಾಲಿಸಿಯು ಒಂದು ವರ್ಷದ ವ್ಯಾಪ್ತಿಯನ್ನು ಹೊಂದಿದ್ದು, ಇದನ್ನು ವಾರ್ಷಿಕವಾಗಿ ನವೀಕರಿಸಬಹುದು.
ವರದಿ ✍️ಸೂರಿ ಬಣಕಲ್