ಬಣಕಲ್ :ಪಟ್ಟಣದಲ್ಲಿ ಬಿಡಾಡಿ ದನಗಳನ್ನು ಹಿಡಿದು ವಾಹನ ಸವಾರರಿಗೆ ಆಗುತ್ತಿರುವ ಸಮಸ್ಯೆಯನ್ನು ಪರಿಹರಿಸಬೇಕು ದನಗಳ್ಳರಿಂದ ಗೋಗಳನ್ನ ರಕ್ಷಿಸಲು ಪರಿಹಾರ ಒದಗಿಸಬೇಕು ಎಂದು ಇಂದು ಬಣಕಲ್ ಗ್ರಾಮ ಪಂಚಾಯಿತಿಯಲ್ಲಿ ನಡೆದ ಸಭೆಯಲ್ಲಿ ಗ್ರಾಮಸ್ಥರು ಮನವಿ ಮಾಡಿದರು.
ಇಂದು ಬಣಕಲ್ ಗ್ರಾಮ ಪಂಚಾಯಿತಿ ಸಮುದಾಯ ಭವನದಲ್ಲಿ ಬಿಡಾಡಿ ದನಗಳ ಬಗ್ಗೆ ಚರ್ಚಿಸಲು ಸಾರ್ವಜನಿಕ ಸಭೆ ಕರೆಯಲಾಗಿತ್ತು.ಈ ಸಂದರ್ಭದಲ್ಲಿ ಸಾರ್ವಜನಿಕರು ಹಲವು ಅಭಿಪ್ರಾಯಗಳನ್ನು ಹಂಚಿಕೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ವಿನಯ್ ಶೆಟ್ಟಿ ಪಟ್ಟಣದಲ್ಲಿ ಬಿಡಾಡಿ ದನಗಳ ಹಾವಳಿ ಹೆಚ್ಚಾಗಿದೆ. ರಾತ್ರಿ ವೇಳೆ ರಸ್ತೆಯಲ್ಲಿ ಮಲಗುತ್ತವೆ. ಸೋಮವಾರ ಸಂತೆ ನಡೆಯುವುದರಿಂದ ಮಾರುಕಟ್ಟೆ ತುಂಬಾ ಬಿಡಾಡಿ ದನಗಳು ಇರುತ್ತವೆ. ರಾತ್ರಿ ವೇಳೆ ಎಲ್ಲೆಂದರಲ್ಲಿ ದನಗಳು ಮಲಗುವುದರಿಂದ ದನಗಳ್ಳರ ಹಾವಳಿ ಮಿತಿ ಮೀರಿದೆ. ಇದಕ್ಕೆಲ್ಲ ಶಾಶ್ವತ ಪರಿಹಾರ ಒದಗಿಸಬೇಕು ಎಂದರೆ ಗೋಶಾಲೆಗೆ ಬಿಡುವುದು.
ಪಟ್ಟಣದಲ್ಲಿ ಅನೇಕ ಅವಘಡಗಳು ಸಂಭವಿಸಿವೆ. ಹಾಗಾಗಿ ಜಾನುವಾರುಗಳ ಮಾಲೀಕರಿಗೆ ಎಚ್ಚರಿಕೆ ನೀಡಿ ಮನೆಯಲ್ಲೇ ಕಟ್ಟಿ ಹಾಕಲು ಆದೇಶ ನೀಡಬೇಕು ಇಲ್ಲವಾದಲ್ಲಿ ಹಿಡಿದು ಗೋಶಾಲೆಗೆ ಬಿಡಬೇಕು ಎಂದು ಅಗ್ರಹಿಸಿದರು.ನಂತರ ಮಾತನಾಡಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೃಷ್ಣಪ್ಪರವರು ಬಿಡಾಡಿ ದನಗಳ ಹಾವಳಿ ಹೆಚ್ಚಾಗಿದ್ದು ಕಡಿವಾಣಕ್ಕಾಗಿ ಸಂಬಂಧಿಸಿದ ಮಾಲೀಕರು ಬಿಡಾಡಿ ದನಗಳನ್ನು ಕಟ್ಟಿಕೊಳ್ಳದಿದ್ದಲ್ಲಿ ಗೋ ಶಾಲೆಗೆ ರವಾನಿಸಲಾಗುವುದು ಜಾನುವಾರುಗಳ ಮಾಲೀಕರಿಗೆ ಶೀಘ್ರವೇ ನೋಟಿಸ್ ನೀಡಲಾಗುವುದು ಮಾಲೀಕರಿಲ್ಲದ ಜಾನುವಾರುಗಳನ್ನು ಗೋಶಾಲೆಗೆ ಕಳುಹಿಸಲು ಕ್ರಮ ವಹಿಸಲಾಗುವುದು ಎಂದು ಸಭೆಯಲ್ಲಿ ಭರವಸೆ ನೀಡಿದರು.ಪಿ ಎಸ್ ಐ ರೇಣುಕಾ ಮಾತನಾಡಿ ಬಿಡಾಡಿ ದನಗಳಿಂದ ಪ್ರತಿ ದಿನ ಅಪಘಾತಗಳು ಸಂಭವಿಸುತ್ತಿದೆ. ಮಾಲೀಕರು ಅದರ ಬಗ್ಗೆ ನಿಗಾ ವಹಿಸಬೇಕು ಇಲ್ಲವಾದಲ್ಲಿ ಮಾಲೀಕರ ಮೇಲೆ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ಸಹಾಯಕ ನಿರ್ದೇಶಕರು ಪಶು ಸಂಗೋಪನಾ ಇಲಾಖೆ ಮೂಡಿಗೆರೆ,ಕಾರ್ಯ ನಿರ್ವಾಹಕ ಅಧಿಕಾರಿ ತಾಲ್ಲೂಕು ಪಂಚಾಯಿತಿ ಮೂಡಿಗೆರೆ,ಆರಕ್ಷಕ ಉಪ ನಿರೀಕ್ಷಿಕರು ಆರಕ್ಷಕ ಠಾಣೆ ಬಣಕಲ್ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು, ತರುವೆ ಗ್ರಾಮಪಂಚಾಯಿತಿ ಅಧ್ಯಕ್ಷರು, ಪಲ್ಗುಣಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ ✍️ಸೂರಿ ಬಣಕಲ್