ಬಣಕಲ್ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ಅಂಗಡಿಗಳಿಗೆ ಭೇಟಿ:ಮಕ್ಕಳಿಗೆ ತಂಬಾಕು ಪದಾರ್ಥ ನೀಡದಂತೆ ಮನವಿ

ತಂಬಾಕು ಸೇವನೆಯ ಹಾನಿಕಾರಕ ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ
ಬಣಕಲ್ ಪ್ರೌಢ ಶಾಲೆವತಿಯಿಂದ
ಶನಿವಾರ ನಡೆಯಿತು.

ಬಣಕಲ್ ನಗರದಲ್ಲಿ ಶಾಲಾ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಅಂಗಡಿಗಳಿಗೆ ಭೇಟಿ ನೀಡಿ 18ವರ್ಷದ ಒಳಗಿನ ಮಕ್ಕಳಿಗೆ ಯಾವುದೇ ತಂಬಾಕು ಪದಾರ್ಥ ಗಳನ್ನು ನೀಡದಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯ ಶಿಕ್ಷಕರಾದ ಶ್ರೀನಿವಾಸ್ ರವರು ನಗರ ಪ್ರದೇಶ ಹಾಗೂ, ಗ್ರಾಮೀಣ ಪ್ರದೇಶದ ಮಕ್ಕಳು ಆಕರ್ಷಕ ಜಾಹೀರಾತು, ವಿನೂತನ ಪ್ಯಾಕಿಂಗ್ ಮತ್ತಿತರ ಕಾರಣಗಳಿಂದಾಗಿ ತಂಬಾಕು ಸೇವನೆಗೆ ಮಾರು ಹೋಗುತ್ತಾರೆ. ಇತ್ತೀಚ್ಚಿನ ದಿನಗಳಲ್ಲಿ ಶಾಲಾ ಮಕ್ಕಳೇ ಹೆಚ್ಚಾಗಿ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಅಂಗಡಿ ಮಾಲೀಕರು ಕೂಡ ಮಕ್ಕಳಿಗೆ ಯಾವುದೇ ತಂಬಾಕು ಪದಾರ್ಥಗಳನ್ನು ನೀಡಬಾರದು ಎಂದು ಮನವಿ ಮಾಡಿದರು. ಆ ರೀತಿ ಮಕ್ಕಳನ್ನು ತಂಬಾಕು ವಿರೋಧಿ ಕಾರ್ಯಕ್ರಮಗಳಲ್ಲಿ ತೊಡಗಿಸುವುದರಿಂದ ಭವಿಷ್ಯದಲ್ಲಿ ತಂಬಾಕು ಪದಾರ್ಥಗಳಿಗೆ ಮಾರು ಹೋಗುವುದಿಲ್ಲ ಎಂದು ತಿಳಿಸಿದರು.

ವರದಿ ✍️ಸೂರಿ ಬಣಕಲ್

Sahifa Theme License is not validated, Go to the theme options page to validate the license, You need a single license for each domain name.