ಬಣಕಲ್ :ಕಾಡಾನೆ ದಾಳಿಯಿಂದ ಕಂಗೆಟ್ಟಿದ್ದ ಮೂಡಿಗೆರೆ ತಾಲೂಕ್ಕಿನ ಜನರು ಇದೀಗ ಕಾಡು ಕೋಣ ದಾಳಿಯಿಂದ ಕಂಗೆಡುವಂತಾಗಿದೆ. ಕಾಡಿನಂಚಿನ ಕೃಷಿ ಭೂಮಿಗೆ ಕಾಡುಕೋಣಗಳು ರಾತ್ರಿ ಹಗಲೆನ್ನದೆ ಹಿಂಡು ಹಿಂಡಾಗಿ ನುಗ್ಗುತ್ತಿದ್ದು ಪ್ರಯಾಣಿಕರು ಜೀವ ಭಯದಲ್ಲಿ ಓಡಾಡುವಂತಾಗಿದೆ.
ನಿನ್ನೆ ರಾತ್ರಿ 7ಗಂಟೆ ಸಮಯದಲ್ಲಿ ಬೈಕ್ ಸವಾರನ ಮೇಲೆ ಕಾಡು ಕೋಣ ದಾಳಿ ಮಾಡಿರುವ ಘಟನೆ ತಾಲೂಕ್ಕಿನ ಮತ್ತಿಕಟ್ಟೆ ರಸ್ತೆಯಲ್ಲಿ ನಡೆದಿದೆ.
ಕೆಲಸ ಮುಗಿಸಿ ಮನೆಗೆ ಹಿಂತಿರುಗುವಾಗ ಕಾಡುಕೋಣದ ದಾಳಿಗೆ ಬೈಕ್ ಸವಾರ ಮತ್ತಿಕಟ್ಟೆ ವಾಸಿ ಕುಮಾರ್ ಎಂಬುವವರು ಗಾಯಗೊಂಡಿದ್ದಾರೆ. ಕುಮಾರ್ ಎಂಬುವವರನ್ನು ಬಣಕಲ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.
ವರದಿ ✍️ಸೂರಿ ಬಣಕಲ್