ಮಾಜಿ ಸೈನಿಕ ಗಿರಿಯಪ್ಪ ಪೂಜಾರಿ ನಿಧನ : ಮಾಜಿ ಸೈನಿಕರಿಂದ ಸಕಲ ಗೌರವದೊಂದಿಗೆ ಅಂತಿಮ ವಿಧಾಯ


ಬಣಕಲ್ :ತಾಲ್ಲೂಕಿನ ಬಣಕಲ್ ಹೋಬಳಿಯ ಸುಭಾಷ್ ನಗರ ವಾಸಿ ಮಾಜಿ ಸೈನಿಕ ಗಿರಿಯಪ್ಪ ಪೂಜಾರಿ ಸುಮಾರು 75 ವರ್ಷ ವಯಸ್ಸಾಗಿದ್ದು ಇವರು ಸುಮಾರು 20ವರ್ಷಗಳ ಕಾಲ ದೇಶದ ನಾನಾ ಗಡಿಭಾಗಗಳಲ್ಲಿ ತಮ್ಮ ಸೈನಿಕ ಸೇವೆಯನ್ನು ಸಲ್ಲಿಸಿದ್ದರು.

ತದನಂತರ ಸ್ವಗ್ರಾಮಕ್ಕೆ ಹಿಂತಿರುಗಿದ್ದರು.ನಿನ್ನೆ ಅವರ ಮನೆಯಲ್ಲಿ ಬೆಳಗಿನ ಜಾವಾ ಹೃದಯಘಾತದಿಂದ ದೈವಾಧೀನರಾಗಿದ್ದರು.

ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ತಾಲ್ಲೂಕಿನ ಮಾಜಿ ಸೈನಿಕರು ಇಂದು ಅವರ ಮನೆಗೆ ಆಗಮಿಸಿ ಸಕಲ ಗೌರವಗಳೊಂದಿಗೆ ಅವರಿಗೆ ವಿದಾಯ ಹೇಳಿದರು.

ವರದಿ :✍️ಸೂರಿ ಬಣಕಲ್