ಬಣಕಲ್ :ಮಾಜಿ ಯೋಧ ಗಿರಿಯಪ್ಪ ಪೂಜಾರಿ ನಿಧನ

ಬಣಕಲ್ ಗ್ರಾಮದ ಸುಭಾಷ್ ನಗರ ವಾಸಿ ಮಾಜಿ ಯೋಧ ಗಿರಿಯಪ್ಪ ಪೂಜಾರಿ (75) ಅವರು ಇಂದು ಬೆಳಗ್ಗೆ ಹೃದಯಾಘಾತದಿಂದ ನಿಧನರಾದರು.

ಭಾರತೀಯ ಸೇನೆಯಲ್ಲಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು ಗಿರಿಯಪ್ಪ ಪೂಜಾರಿ ಅವರಿಗೆ ಇಬ್ಬರು ಗಂಡು ಹಾಗೂ ಒಬ್ಬಳು ಹೆಣ್ಣು ಮಕ್ಕಳಿದ್ದಾರೆ. ಮಾಜಿ ಯೋಧನ ಅಗಲಿಕೆಗೆ ಸ್ವಗ್ರಾಮ ಬಣಕಲ್ಲನ ಸಾರ್ವಜನಿಕರು ಕಂಬನಿ ಮಿಡಿದಿದ್ದಾರೆ.

ಮೃತರ ಅಂತ್ಯಕ್ರಿಯೆ ನಾಳೆ 9ಗಂಟೆಗೆ ಮಾಜಿ ಯೋಧರು ಮೂಡಿಗೆರೆ ಚಿಕ್ಕಮಗಳೂರು ಜಿಲ್ಲೇ ಇವರ ವತಿಯಿಂದ ಮಿಲಿಟರಿ ಗೌರವದೊಂದಿಗೆ ಅಂತ್ಯಕ್ರಿಯೆ ಪೆರೇಡ್ ನಡೆಸಲಾಗುವುದು ಎಂದು ತಿಳಿದು ಬಂದಿದೆ.

ವರದಿ :✍️ಸೂರಿ ಬಣಕಲ್