ಬಣಕಲ್ : ಬೃಹತ್ ಉಚಿತ ದಂತ ಚಿಕಿತ್ಸಾ ಶಿಬಿರವು ಇಂದು ಬಣಕಲ್ ಸಾಯಿಕೃಷ್ಣ ಆಸ್ಪತ್ರೆಯಲ್ಲಿ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬಣಕಲ್ ಪ್ರೌಢಶಾಲೆ ಮುಖ್ಯ ಶಿಕ್ಷಕರಾದ ಪಿ ವಾಸುದೇವ ಮಾತನಾಡಿ ಸಾಯಿಕೃಷ್ಣ ಆಸ್ಪತ್ರೆಯು ಬಣಕಲ್ ಬಾಗದ ಜನರಿಗೆ ಆರೋಗ್ಯ ಸಂಜಿವಿನಿಯಾಗಿದೆ,ಬಣಕಲ್ ಸುತ್ತಲಿನ ಊರಿನಲ್ಲಿ ಯಾವುದೇ ಅಪಘಾತಗಳು ನಡೆದಾಗ ತುರ್ತು ಚಿಕಿತ್ಸೆಗೆ ಅನುಕೂಲವಾಗಿದೆ,ಇಂತಹ ಶಿಬಿರವು ಜನರಲ್ಲಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು ಸಹಕಾರಿಯಾಗಿದೆ ಎಂದರು,ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಣಕಲ್ ಗ್ರಾ ಪಂ ಅಧ್ಯಕ್ಷರಾದ ಶ್ರೀಮತಿ ಅತಿಕಾ ಬಾನು ವಹಿಸಿದ್ದರು,ಕಾರ್ಯಕ್ರಮದಲ್ಲಿ ಅತಿಥಿಗಳನ್ನು ಸ್ವಾಗತಿಸಿ ಮಾತನಾಡಿದ ಶ್ರೀ ಕೃಷ್ಣ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ.ಮುರಳಿಕೃಷ್ಣ ಇರ್ವತ್ರಾಯ ಶಿಬಿರದ ಬಗ್ಗೆ ಮಾಹಿತಿ ನೀಡಿದರು, ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಮುದಾಯ ದಂತ ವಿಭಾಗ ಯೆನೆಪೋಯ ದಂತ ಕಾಲೇಜು ಮತ್ತು ಆಸ್ಪತ್ರೆಯ ಡಾ.ಪ್ರಮಾದ ಪ್ರಭಾಕರ್, ದಂತ ಚಿಕಿತ್ಸಾ ವಿಭಾಗದ ಸಂಪರ್ಕಧಿಕಾರಿ ಭರತ್ ಕುಮಾರ್, ಸಾಯಿಕೃಷ್ಣ ಹೆಲ್ತ್ ಸೆಂಟರ್ ಇದರ ನಿರ್ದೇಶಕರಾದ ಶ್ರೀಮತಿ ಭವ್ಯ ನವೀನ್, ಶ್ರೀ ಕೃಷ್ಣ ಆಸ್ಪತ್ರೆಯ ದಂತ ವೈದ್ಯಾಧಿಕಾರಿ ಡಾ.ಪ್ರಕೃತಿ ಶೆಟ್ಟಿ,ಬಣಕಲ್ ಕ್ರೈಸ್ತರ ಸಂಘದ ಅಧ್ಯಕ್ಷರಾದ ಮೆಲ್ವಿನ್ ಲಸ್ರಾದೊ,ಕಾರ್ಯಕ್ರಮದಲ್ಲಿ ಶ್ರೀ ಕೃಷ್ಣ ಆಸ್ಪತ್ರೆಯ ಆಡಳಿತಾಧಿಕಾರಿ ಶ್ರೀಮತಿ ಜ್ಯೋತಿ ವಿ ಸ್ವರೂಪ್,ಸಾಯಿಕೃಷ್ಣ ಹೆಲ್ತ್ ಸೆಂಟರ್ ನ ವೈದ್ಯಾಧಿಕಾರಿಗಳಾದ ಡಾ.ಮದನ್ ,ಡಾ.ಅಜಿತ್ ಹರಿ,ಡಾ.ಮೌಲ್ಯ,ಸಿಬ್ಬಂದಿಗಳಾದ ಗಣೇಶ್, ಅನಂತ್ ಪ್ರಸಾದ್, ಹೈದರ್ ಅಲಿ ಮೊದಲಾದವರಿದ್ಧರು,ಡಾ.ಅಜಿತ್ ಧನ್ಯವಾದವಿತ್ತರು.ಶಿಬಿರದಲ್ಲಿ ಸುಮಾರು 150 ಕ್ಕೂ ಅದಿಕ ಸಾರ್ವಜನಿಕರು ಪಾಲ್ಗೊಂಡು ದಂತ ಚಿಕಿತ್ಸಾ ಶಿಬಿರದ ಪ್ರಯೋಜನ ಪಡೆದುಕೊಂಡರು.
Banakal News ನಮ್ಮ ನಡೆ ರೋಚಕ ಸುದ್ದಿಯ ಕಡೆ