ಸಮಾಜ ಸೇವೆ ಮಾಡುವ ಮೂಲಕ ಸದ್ದಿಲದೆ ಜನ ಮನಗೆಲ್ಲುತ್ತಿರುವ ವಿಜಯ್ ಕುಮಾರ್

ಬಣಕಲ್:ಸಮಾಜದಲ್ಲಿ ಯಾರಿಗಾದರೂ ಏನಾದರೂ ಆಪತ್ತು ಸಂಭವಿಸಿದರೆ ಸಹಾಯಹಸ್ತ ಚಾಚುವವರ ಸಂಖ್ಯೆ ಬಹಳ ಕಡಿಮೆ. ತಾವಾಯಿತು, ತಮ್ಮ ಪಾಡಾಯಿತು ಎಂದು ಮನೆಯೊಳಗೆ ಕೂರುವವರೇ ಹೆಚ್ಚು. ಸಮಾಜ ಸೇವೆ ಮಾಡಬೇಕು ಅಂದರೆ ಅದು ಎಂಎಲ್ಎನೇ ಆಗಬೇಕೆಂದ್ದೀಲ್ಲ ಜನಪ್ರತಿನಿದಿ ಆಗದಿದ್ದರೂ ಸಮಾಜದ ಬಗ್ಗೆ ಕಾಳಜಿ ಇರಿಸಿಕೊಂಡು ಸಮಾಜ ಸೇವೆ ಮಾಡಿ ಜನರಿಗೆ ನೆರವಾಗಬಹುದು ಎಂಬುದನ್ನು ಇಲ್ಲೊಬ್ಬರು ಸಮಾಜ ಸೇವಕ ಸದ್ದಿಲ್ಲದೇ ಆ ಕಾರ್ಯ ಮಾಡುತ್ತಿದ್ದಾರೆ. ನಾನು ಹುಟ್ಟಿ ಬೆಳೆದ ಊರು ಹಾಗೂ ತನ್ನ ತಾಲೂಕಿನ ಜನರ ಬಗ್ಗೆ ಸದಾ ಚಿಂತಿಸುತ್ತಾ ನಿತ್ಯ ಅವರ ಅಭಿವೃದ್ಧಿಗೆ ಬದ್ಧರಾಗಿ ಎಲ್ಲರ ಮನ ಗೆದ್ದಿದ್ದಾರೆ
ಕಠಿಣ ಅಭ್ಯಾಸ, ಸತತ ಪರಿಶ್ರಮ ಯಶಸ್ಸಿಗೆ ಮೂಲ ಕಾರಣ ಎಂಬುದನ್ನು ಸಾಧನೆಯ ಹಾದಿಯಲ್ಲಿ ಮುನ್ನುಗುತ್ತಿರುವ ಸಮಾಜ ಸೇವಕ ವಿಜಯ್ ಕುಮಾರ್.ಅವರು ಮಾಡಿರುವ ಸಾಧನೆ ಹಾಗೂ ಸಮಾಜ ಸೇವೆಯೇ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ತಾಲೂಕಿನಾದ್ಯಂತ ಸಮಾಜ ಸೇವೆ ಮೂಲಕ ಚಿರಪರಿಚಿತರಾಗಿದ್ದಾರೆ. ಬಣಕಲ್ ಹೋಬಳಿಯ ಸುಣ್ಣದ ಗೂಡಿನ ವಾಸಿಗಳು 2ವರ್ಷಗಳಿಂದ ವಿದ್ಯುತ್ ಇಲ್ಲದವರಿಗೆ ವಿದ್ಯುತ್ ಕಲ್ಪಿಸಿ ಬೆಳಕನ್ನು ನೀಡಿ ಜನ ಮೆಚ್ಚುಗೆ ಗಳಿಸಿದ್ದಾರೆ.ಯಾವುದೋ ಒಂದು ಪುಟ್ಟ ಊರಿನಲ್ಲಿ ಎಲೆಮರಿಯ ಕಾಯಿಯಂತೆ ಇರುವವರಿಗೆ ಸಮಾಜದಲ್ಲಿ ತಮಗೆ ಒಂದು ಗೌರವದ ಸ್ಥಾನ ಪಡೆಯುವುದು ಅಷ್ಟು ಸುಲಭದ ಕೆಲಸವಲ್ಲ. ಅವರ ಸಾಮಾಜಿಕ ಕಳಕಳಿ, ಯಾವುದೇ ಲಾಭವನ್ನು ಆಶಿಸದೇ ಮಾಡುವ ಸಮಾಜ ಸೇವೆಗಳೇ (Social Service) ತಮ್ಮ ಗೌರವಕ್ಕೆ ಮೂಲಕ ಕಾರಣ
ವಿಜಯ್ ಕುಮಾರ್ ಅವರು ಹಲವಾರು ವರ್ಷಗಳಿಂದ ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಧಾರ್ಮಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಸಹಾಯ ಹಸ್ತ ಚಾಚುತ್ತಾ ಸಾಮಾಜಿಕ ಕಳಕಳಿ ಮೆರೆದಿದ್ದಾರೆ.ಅಲ್ಲದೇ, ನಿತ್ಯ ಇವರ ಬಳಿ ಸಮಸ್ಯೆ ಎಂದು ಬರುವವರ ಸಮಸ್ಯೆ ನೀಗಿಸುತ್ತಾ ಸಾಮಾಜಿಕ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ… ಅವರ ಶಾಲಾ ಕಾಲೇಜು ಹಂತದಲ್ಲಿ ಒಂದು ಹೊತ್ತಿನ ಊಟ ಮಾಡಬೇಕು ಎಂದರೂ ಅದಕ್ಕಿರುವ ಕಷ್ಟ ಎಷ್ಟಿದೆ ಎಂಬುದನ್ನು ಅವರು ಅರಿತುಕೊಂಡಿದ್ದಾರೆ. ಹಾಗಾಗಿ ನಮ್ಮಂತೆ ಸಾಕಷ್ಟು ಜನರು ಅನೇಕ ತೊಂದರೆಯಲ್ಲಿ ಇದ್ದೇ ಇರುತ್ತಾರೆ. ಅವರ ಕಷ್ಟಕ್ಕೆ ನಮ್ಮಿಂದಾದ ಸಹಾಯ ಮಾಡಬೇಕು ಎಂದುಕೊಂಡು ಅವರು ಸಮಾಜ ಸೆವೆಯಲ್ಲಿತೊಡಗಿ ಕೊಂಡಿದ್ದಾರೆ.
ಇಂತಹ ಅನೇಕ ಸಾಮಾಜಿಕ ಸೇವೆಯನ್ನು ಮನಗಂಡು ಅನೇಕ ಸಂಘ, ಸಂಸ್ಥೆಗಳು ಇವರನ್ನು ಕರೆದು ಸನ್ಮಾನಿಸಿವೆ. ಸಮಾಜಸೇವೆಯನ್ನು ಮಾಡಿದರೆ ನನಗೆ ನೆಮ್ಮದಿ ಸಿಗುತ್ತದೆ. ಯಾವುದೋ ಪ್ರಚಾರದ ಗೀಳಿಗೆ ನಾನು ಸಮಾಜ ಸೇವೆ ಮಾಡುತ್ತಿಲ್ಲ. ಮನಸ್ಫೂರ್ತಿಯಾಗಿ ಮಾಡುತಿದ್ದೇನೆ. ಎಂದು ತಿಳಿಸಿದರು.ಮನೆಯಿಲ್ಲದ ನಮಗೆ ಆರ್ಥಿಕ ನೆರವು ನೀಡಿದ್ದಾರೆ . ನಮ್ಮಂತ ಅನೇಕ ಜನರಿಗೆ ಅವರು ಸಹಾಯ ಮಾಡುತ್ತಿದ್ದಾರೆ. ನೂರುಕಾಲ ದೇವರು ಅವರನ್ನು ಚೆನ್ನಾಗಿಟ್ಟಿರಲಿ ಎಂದು ಜನರ ಆರೈಸಿದ್ದಾರೆ ಮುಂದೆಯೂ ಇನ್ನೂ ಹೆಚ್ಚು ಜನಪರ ಕಾರ್ಯಕ್ರಮಗಳನ್ನು ಮಾಡಲು ದೇವರು ಶಕ್ತಿ ನೀಡಲಿ ಎಂಬುದು ಗ್ರಾಮಸ್ಥರ ಆಶಯ.

Sahifa Theme License is not validated, Go to the theme options page to validate the license, You need a single license for each domain name.