ತಾನು ನಂಬಿದ ಪಕ್ಷಕೋಸ್ಕರ 50ವರ್ಷ ಗಳಿಂದ ಒಂದು ಬಿಡಿಗಾಸು ಪಡೆಯದೇ ಹಗಲಿರುಳು ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಅಪರೂಪದ ವ್ಯಕ್ತಿ ಪ್ಯಾರು ಸಾಹೇಬ್ರು

ಮೂಡಿಗೆರೆ :ರಾಜಕೀಯ ಎಂದ ಮೇಲೆ ಪಕ್ಷಕ್ಕಾಗಿ ದುಡಿಯುವವರ ಗುಂಪು ಪಕ್ಷ ಮತ್ತು ಸ್ವಾರ್ಥ ಎರಡೂ ಕಡೆ ಉತ್ತಮ ಕೆಲಸ ಮಾಡುವ ಇನ್ನೊಂದು ಗುಂಪು ನಮ್ಮ ಈ ಚೌಕಟ್ಟಿನಲ್ಲಿ ಹಲವಾರು ಜನರು ಕಾಣಸಿಗುತ್ತಾರೆ ಆದರೆ ಇವರೆಲ್ಲರ ನಡುವೆ ಭಿನ್ನವಾಗಿ ಕಾಣ ಸಿಗುವುದೇ ಮೂಡಿಗೆರೆ ತಾಲೂಕ್ಕಿನ ಬಣಕಲ್ ಗ್ರಾಮದ ಶಾಂತಿ ನಗರದ ವಾಸಿ ಕಾಂಗ್ರೆಸ್ ನ ನಿಷ್ಠಾವಂತ ಕಾರ್ಯಕರ್ತ ಪ್ಯಾರು ಸಾಹೇಬ್ರು ಯಾವುದೇ ಪ್ರಚಾರ ಬಯಸದೆ ಯಾವುದೇ ಅಧಿಕಾರ ಬಯಸದೆ ಪಕ್ಷ ದಿಂದ ಯಾವುದೇ ಪ್ರತಿ ಫಲಾಪೆಕ್ಷೆ ಬಯಸದೆ ಪಕ್ಷ ನಿಷ್ಠೆ ಬದಲಾಯಿಸದೆ ಕಳೆದ 50ವರ್ಷಗಳಿಂದ ತಾನು ನಂಬಿದ ಪಕ್ಷಕ್ಕಾಗಿ ಹಗಲಿರುಳು ಎನ್ನದೆ ಒಂದೇ ಪಕ್ಷಕ್ಕೆ ನಿಷ್ಠೆ ತೋರಿಸುತ್ತಿರುವ ಶ್ರಮ ಜೀವಿ,,ಚುನಾವಣೆ ಸಂದರ್ಭದಲ್ಲಿ ಮಾತ್ರ ನಾಯಕರು ಗಳು ಕಾರ್ಯಕರ್ತರುಗಳು ಓಡಾಟ ಮಾಡಿ ನಂತರ ಅವರವರ ಕೆಲಸದಲ್ಲಿ ಮಗ್ನರಾಗಿತ್ತಾರೆ ಇದು ಎಲ್ಲಾ ಪಕ್ಷದಲ್ಲೂ ಸರ್ವೇ ಸಾಮಾನ್ಯವಾಗಿ ನಾವುಗಳು ನೋಡಿಕೊಂಡು ಬಂದಿರುತ್ತೇವೆ ಆದರೆ ಈ ವ್ಯಕ್ತಿ ಚುನಾವಣ ಪ್ರಚಾರದಿಂದ ಹಿಡಿದು ಕೊನೆಯ ಮತ ಏಣಿಕೆ ಪ್ರಕ್ರಿಯೆ ವರೆಗೂ ಇದ್ದು ನಂತರ ಪ್ರತಿಯೊಬ್ಬರ ಬಳಿ ಸಮೀಕ್ಷೆ ನಡೆಸಿ ಯಾವ ಪಕ್ಷ ಮುಂದಿದೆ ಎಂಬುದನ್ನು ಕರಾರುವಾಕ್ಕಾಗಿ ಫಲಿತಾಂಶ ಬರುವ ಮುನ್ನವೇ ತಿಳಿಸುತ್ತಾರೆ ಹೀಗೆ ತನ್ನ ಜೀವನದ ಅರ್ಧ ಆಯಸ್ಸು ತನ್ನ ಪಕ್ಷಕ್ಕಾಗಿ ಅರ್ಪಿಸಿರುವ ಇವರ ನಿಸ್ವಾರ್ಥ ಸೇವೆಗೆ ತಾಲ್ಲೂಕಿನಾದ್ಯಂತ ಜನರು ಹೆಮ್ಮೆ ವ್ಯಕ್ತಪಡಿಸುತ್ತಾರೆ ಎಲ್ಲಾ ಪಕ್ಷಗಳಲ್ಲೂ ಸ್ನೇಹಿತರನ್ನು ಗಳಿಸಿರುವ ಇವರು ಬಣಕಲ್ ನಲ್ಲಿ ಪ್ರತಿಯೊಬ್ಬನೂ ಗುರುತಿಸುವ ವ್ಯಕ್ತಿ ಯಾಗಿದ್ದಾರೆ ಪಕ್ಷದ ಕಡೆಯಿಂದ ಒಂದು ಟೀ ಸಮೇತ ಕುಡಿಯದೆ ಮತ ಪ್ರಚಾರ ಸಂದರ್ಭದಲ್ಲೂ ಒಂದು ನಯ ಪೈಸೆಗೂ ಅಸೆ ಪಡದೆ ಪಕ್ಷಕ್ಕಾಗಿ ನಿಯತ್ತಾಗಿ ದುಡಿಯುತ್ತಿರುವ ಪ್ಯಾರು ಸಾಹೇಬ್ರು ತನ್ನ 70ನೇ ಇಳಿ ವಯಸಿನಲ್ಲೂ ಪಾದರಸದಂತೆ ಕೆಲಸ ಮಾಡುತ್ತಿರುವ ಇವರು ಯಾವುದೇ ಪ್ರಚಾರವನ್ನೂ ಬಯಸದೆ ತಾನಾಯಿತು ತನ್ನ ಕೆಲಸವಾಯಿತು ಎಂದು ತನ್ನಷ್ಟಕ್ಕೆ ಕೆಲಸ ಮಾಡುತಿದ್ದಾರೆ ಹಣ ಮಾಡಲೆಂದೆ ರಾಜಕೀಯ ಮಾಡಲು ಬರುವ ಜನರ ನಡುವೆ ಈ ಮನುಷ್ಯ ಭಿನ್ನವಾಗಿ ನಿಲ್ಲುತ್ತಾರೆ

Sahifa Theme License is not validated, Go to the theme options page to validate the license, You need a single license for each domain name.