ಮನೆ ಅಂಗಡಿಗಳಿಗೆ ನುಗ್ಗಿದ ಕೊಳಚೆ ನೀರು ವರ್ತಕರು ಕಂಗಾಲು

ಬಣಕಲ್ :ನಗರದಲ್ಲಿ ಎರಡು ದಿನಗಳಿಂದ ಸಂಜೆ ಮತ್ತು ಮದ್ಯಾಹ್ನ ಹೊತ್ತಿನಲ್ಲಿ ಮಳೆ ಸುರಿದ ಪರಿಣಾಮ ಗೌತಮ್ ಹಾಗೂ ಬದ್ರಿಯಾ ಹೋಟೆಲ್ ಗೆ ನೀರು ನುಗ್ಗಿದೆ
ನಗರದ ಬಹುತೇಕ ಪ್ರದೇಶಗಳಲ್ಲಿ ಅರ್ಧಗಂಟೆ ನಿರಂತರವಾಗಿ ಸುರಿದ ಮಳೆಯಿಂದಾಗಿ, ಪ್ರಮುಖ ರಸ್ತೆಗಳು ಕೆಲವೆಡೆ ಮನೆಗಳಿಗೂ ನೀರು ನುಗ್ಗಿದ್ದರಿಂದ, ನಿವಾಸಿಗಳು ತೊಂದರೆ ಅನುಭವಿಸಿದರು.

ಬೆಳಿಗ್ಗೆಯಿಂದ ನಗರದಲ್ಲಿ ಬಿಸಿಲು ಇತ್ತು. ಆಗಾಗ ಮಾತ್ರ ಮೋಡ ಕವಿದ ವಾತಾವರಣ ಕಾಣಿಸಿತ್ತು. ಮದ್ಯಾಹ್ನ 2 ಗಂಟೆ ಸುಮಾರಿಗೆ ಮೋಡ ಕವಿದ ವಾತಾವರಣದೊಂದಿಗೆ ಜೋರಾಗಿ ಗಾಳಿ ಬೀಸಿತು.
ನಂತರ ಶುರುವಾದ ಮಳೆಯ ಅಬ್ಬರ, ಅರ್ಧ ಗಂಟೆಯವರೆಗೂ ಇತ್ತು.ರಸ್ತೆ ಕಾಮಗಾರಿ ನಡೆಯುತ್ತಿರುವುದರಿಂದ ಮಳೆ ನೀರು ಸಮರ್ಪಕವಾಗಿ ಹೋಗಲು ಸಾಧ್ಯವಾಗದೆ ಅಂಗಡಿ ಮುಂಭಾಗದಲ್ಲಿ ಕೆರೆಯಂತೆ ಭಾಸವಾಗುತ್ತಿದೆ. ಕಳೆದ ಮಳೆಗಾಲದಲ್ಲೂ ಸಹ ಇದೆ ರೀತಿ ತೊಂದರೆ ಅನುಭವಿಸಿದ್ದೆವು ದಯವಿಟ್ಟು ಸಂಬಂಧ ಪಟ್ಟವರು ಮಳೆ ನೀರು ನಿಲ್ಲದಂತೆ ಸರಾಗವಾಗಿ ಹೋಗಲು ವ್ಯವಸ್ಥೆ ಕಲ್ಪಿಸಬೇಕೆಂದು ಅಂಗಡಿ ಮಾಲೀಕ ಗೌತಮ್ ಅಗ್ರಹಿಸಿದ್ದಾರೆ..