ಬಣಕಲ್ :ಮೂಡಿಗೆರೆ ತಾಲ್ಲೂಕು ಬಣಕಲ್ ಗ್ರಾಮದ ಶ್ರೀ ಮಹಮ್ಮಾಯಿ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ವರ್ಷಂಪ್ರತಿ ನಡೆಯುವ ಶ್ರೀ ಗುಳಿಗ ದೈವದ ಕೋಲಾ ನೇಮೋತ್ಸವ ಬುಧವಾರ ರಾತ್ರಿ ನಡೆಯಿತು.ವರ್ಷಕ್ಕೊಮ್ಮೆ ಸಂಭ್ರಮದಿಂದ ದೈವಗಳ ಕೋಲನಡೆಸುತ್ತಾ ಬಂದಿದ್ದಾರೆ.ಆದರೆ ಕೋವಿಡ್ ಹಿನ್ನಲೆಯಲ್ಲಿ ಈ ಆಚರಣೆಗೆ 3ವರ್ಷಗಳಿಂದ ತೊಡಕು ಉಂಟಾಗಿತ್ತು, ಆದರೆ ಈ ಬಾರಿ ದೇವಸ್ಥಾನದ ಆಡಳಿತ ಮಂಡಳಿ ಅದ್ದೂರಿಯಾಗಿ ದೈವ ಕೋಲ ಆಯೋಜಿಸಿದ್ದರು. ರಾತ್ರಿಯಿಡಿ ನಡೆದ ಈ ಕೋಲಕ್ಕೆ ಸಾವಿರಾರು ಸಂಖ್ಯೆ ಯಲ್ಲಿ ಭಕ್ತಾದಿಗಳು ಆಗಮಿಸಿದ್ದರು.ಬೆಳಗ್ಗೆಯಿಂದಲೇ ಶ್ರೀ ಮಹಮ್ಮಾಯಿ ದುರ್ಗಾಪರಮೇಶ್ವರಿ ದೇವಿ ದೇವಸ್ಥಾನದಲ್ಲಿ ಪ್ರತಿಷ್ಠಾ ವರ್ದಂತ್ಯುತ್ಸವ ವಿಜೃಂಭಣೆ ಯಿಂದ ನಡೆಯಿತು ದೇವತಾ ಪ್ರಾರ್ಥನೆ, ಸ್ವಸ್ತಿ ಪುಣ್ಯವಾಚನ, ಕಲಶಾಭಿಷೇಕ, ಗಣಹೋಮ,ಶ್ರೀ ದುರ್ಗಾಹೋಮ,ಮುಂತಾದ ವಿಧಿವಿಧಾನಗಳು ವಿಜೃಂಭಣೆಯಿಂದ ನಡೆಯಿತು. ಮದ್ಯಾಹ್ನ ಮಹಾಪೂಜೆಯಾಗಿ ಭಕ್ತಾದಿಗಳಿಗೆ ಪ್ರಸಾದ ವಿತರಣೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ಮಾಡಿದರು. ರಾತ್ರಿಯೂ ಸಹ ದೇವಿಗೆ ವಿಶೇಷ ಪೂಜೆ , ಪ್ರಸಾದ ವಿತರಣೆ ಹಾಗೂ ಭಕ್ತಾದಿಗಳಿಗೆಅನ್ನಸಂತರ್ಪಣೆ ಮಾಡಲಾಗಿತ್ತು. ಹಾಗೂ ಮಹಾಪೂಜೆ ಅದನಂತರ 10ಗಂಟೆಗೆ ಗುಳಿಗ ದೈವದ ಕೋಲ ಪ್ರಾರಂಭವಾಯಿತು ಊರಪರಊರ ಸಾವಿರಾರು ಭಕ್ತಾದಿಗಳು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿ ತಾವು ನಿವೇದನೆ ಮಾಡಿಕೊಂಡಿರುವ ಹರಕೆಗಳನ್ನು ದೈವಗಳಿಗೆ ಸಮರ್ಪಿಸಿದರು. ಆಗಮಿಸಿದ ಎಲ್ಲರಿಗೂ ನಿರಂತರ ಅನ್ನ ಸಂತರ್ಪಣೆ ನಡೆಯಿತು ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರು ಮತ್ತು ಸ್ಥಳೀಯ ಯುವಕರು ಸ್ವಯಂಸೇವಕರಾಗಿ ಸೇವೆ ಸಲ್ಲಿಸಿದರು ದೇವಸ್ಥಾನಕ್ಕೆ ಹೋಗುವ ರಸ್ತೆ ಜಂಕ್ಷನ್ ನಿಂದ ಕೇಸರಿ ಬಂಟಿಂಗ್ಸ್ ಮತ್ತು ಲೈಟಿಂಗ್ಸ್ ನಿಂದ ಕಂಗೊಳಿಸಲಾಗಿತ್ತು. ದೇವಸ್ಥಾನವನ್ನುಹಾಗೂ ದೇವಿಯನ್ನು ಹೂವಿನಿಂದ ಸಿಂಗಾರಿಸಲಾಗಿತ್ತು.ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು ಹಾಗೂ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಇದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
